Publish Date: Sat, 16 Sep 2017 (08:23 IST)
Updated Date: Sat, 16 Sep 2017 (08:30 IST)
ಮುಂಬೈ: ಎಲ್ಲೋ ಇರಬೇಕಿದ್ದ ನನ್ನನ್ನು ಇಂದು ಜಗತ್ತೇ ಗುರುತಿಸುವಷ್ಟು ಎತ್ತರಕ್ಕೆ ಏರಿಸಿದ್ದು, ನಾಯಕ ವಿರಾಟ್ ಕೊಹ್ಲಿ ಎಂದು ಟೀಂ ಇಂಡಿಯಾ ಬೌಲರ್ ಯಜುವೇಂದ್ರ ಚಾಹಲ್ ಹೇಳಿಕೊಂಡಿದ್ದಾರೆ.
ಕೊಹ್ಲಿ ನಾಯಕತ್ವದಲ್ಲಿ ಐಪಿಎಲ್ ನ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದ ಚಾಹಲ್ ಕೊಹ್ಲಿ ಶಿಫಾರಸ್ಸಿನಿಂದಾಗಿ ಟೀಂ ಇಂಡಿಯಾ ಪ್ರವೇಶಿಸಿದ್ದು, ಏಕದಿನ ತಂಡದಲ್ಲಿ ಸ್ಥಿರವಾಗಿ ಸ್ಥಾನ ಪಡೆಯುತ್ತಿದ್ದಾರೆ. ತನ್ನ ಪ್ರದರ್ಶನದಿಂದಲೂ ಕೊಹ್ಲಿ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
‘ಮೊದಲೆಲ್ಲಾ ನನ್ನನ್ನು ಯಾರೋ ಒಬ್ಬ ಚಾಹಲ್ ಎನ್ನುತ್ತಿದ್ದರಷ್ಟೇ. ಆದರೆ ವಿರಾಟ್ ನನಗೆ ಹೊಸದೊಂದು ಹೆಸರು ಕೊಟ್ಟರು. ಎಲ್ಲರೂ ಗುರುತಿಸುವಂತೆ ಮಾಡಿದರು. ಅವರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದು ಚಾಹಲ್ ನಾಯಕ ಕೊಹ್ಲಿಯನ್ನು ಹೊಗಳಿದ್ದಾರೆ.