Publish Date: Wed, 06 May 2020 (09:00 IST)
Updated Date: Wed, 06 May 2020 (09:01 IST)
ಮುಂಬೈ: ಧೋನಿಯಿಂದಾಗಿ ನನ್ನ ಮಗ ರಾಷ್ಟ್ರೀಯ ತಂಡದಲ್ಲಿ ಅವಕಾಶ ವಂಚಿತನಾದ ಎಂದು ಆಗಾಗ ಹೇಳಿಕೆ ನೀಡುವ ಮೂಲಕ ಸುದ್ದಿಯಾಗುವ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಈಗ ಮತ್ತೆ ಕೊಹ್ಲಿ, ಧೋನಿ ವಿರುದ್ಧ ಹೇಳಿಕೆ ನೀಡಿದ್ದಾರೆ.
ಅಷ್ಟೇ ಅಲ್ಲ, ಆಯ್ಕೆ ಸಮಿತಿ ಸದಸ್ಯರಾಗಿದ್ದ ಸಂದೀಪ್ ಸಿಂಗ್ ರನ್ನೂ ತರಾಟೆಗೆ ತೆಗೆದುಕೊಂಡಿರುವ ಯೋಗರಾಜ್ ಸಿಂಗ್, ಇವರಿಗೆಲ್ಲಾ ಕ್ರಿಕೆಟ್ ನ ಎಬಿಸಿ ಗೊತ್ತಿಲ್ಲ. ಈ ವ್ಯಕ್ತಿ ಪ್ರತೀ ಬಾರಿಯೂ ಯುವರಾಜ್ ನನ್ನು ತಂಡದಿಂದ ಕೈಬಿಡಬೇಕು ಎಂದು ಒತ್ತಾಯಿಸುತ್ತಿದ್ದರು.
ಅವರ ಜತೆಗೆ ಧೋನಿ, ಕೊಹ್ಲಿ ಯುವರಾಜ್ ಸಿಂಗ್ ರನ್ನು ಸಂಪೂರ್ಣವಾಗಿ ಕಡೆಗಣಿಸಿದರು. ಇವರೆಲ್ಲಾ ಸೇರಿಕೊಂಡು ನನ್ನ ಮಗನ ಬೆನ್ನಿಗೆ ಚೂರಿ ಇರಿದರು ಎಂದು ಯೋಗರಾಜ್ ಸಿಂಗ್ ಆರೋಪಿಸಿದ್ದಾರೆ.