Publish Date: Mon, 01 Jun 2020 (10:27 IST)
Updated Date: Mon, 01 Jun 2020 (10:29 IST)
ಮುಂಬೈ: ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಗೆ ಲಟ್ಟಣಿಗೆ ಹಿಡಿಯುವ ಚಾಲೆಂಜ್ ನೀಡಿದ್ದಾರೆ!
ಯುವರಾಜ್ ಸಿಂಗ್ ಮೊನ್ನೆಯಷ್ಟೇ ಬ್ಯಾಟ್ ನಲ್ಲಿ ಬಾಲ್ ಬ್ಯಾಲೆನ್ಸ್ ಮಾಡುವ ಚಾಲೆಂಜ್ ಕೊಟ್ಟಿದ್ದರು. ಇದನ್ನು ಸಚಿನ್ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಮಾಡಿ ಚಮಕ್ ಕೊಟ್ಟಿದ್ದರು.
ಈಗ ಯುವಿ ಮತ್ತೊಂದು ಚಾಲೆಂಟ್ ಕೊಟ್ಟಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಲಟ್ಟಣಿಗೆಯಲ್ಲಿ ಅಡುಗೆ ಮನೆಯಲ್ಲಿ ಬಾಲ್ ಅತೀ ಹೆಚ್ಚು ಬಾರಿ ಬೌನ್ಸ್ ಮಾಡುವ ಚಾಲೆಂಜ್ ನೀಡಿದ್ದಾರೆ. ಇದಕ್ಕೂ ಟ್ವಿಸ್ಟ್ ನೀಡಿರುವ ಸಚಿನ್ ಅದೇ ಲಟ್ಟಣಿಗೆ ಬಳಸಿ ಪರಾಟ ತಯಾರಿಸುವ ಪ್ರತಿ ಸವಾಲು ಹಾಕಿದ್ದಾರೆ. ಇದಕ್ಕೆ ಯುವಿ ಯಾವ ರೀತಿ ಉತ್ತರ ನೀಡುತ್ತಾರೆ ನೋಡಬೇಕಿದೆ.