Publish Date: Sat, 14 Sep 2019 (13:23 IST)
Updated Date: Sat, 14 Sep 2019 (13:26 IST)
ಕಿಂಗ್ ಸ್ಟನ್: ವೆಸ್ಟ್ ಇಂಡೀಸ್ ನ ಪ್ರಮುಖ ಕ್ರಿಕೆಟಿಗ ಆಂಡ್ರೆ ರಸೆಲ್ ಸಿಪಿಎಲ್ ಟಿ20 ಪಂದ್ಯದ ವೇಳೆ ಭಾರೀ ಅಪಾಯದಿಂದ ಕೂದಲೆಳಯಲ್ಲಿ ಪಾರಾಗಿದ್ದಾರೆ.
ಸಿಪಿಎಲ್ ಪಂದ್ಯದ ವೇಳೆ ಜಮೈಕಾ ತಂಡದ ಪರ ಆಡುವ ರಸೆಲ್ ಬ್ಯಾಟಿಂಗ್ ಮಾಡುತ್ತಿರುವಾಗ ಎದುರಾಳಿ ಸೈಂಟ್ ಲೂಸಿಯಾ ತಂಡದ ಬೌಲರ್ ಹಾರ್ಡನ್ ವಿಲ್ಜೋನ್ ಎಸೆದ ಚೆಂಡು ನೇರವಾಗಿ ಬಲಗಿವಿಗೆ ತಾಕಿ ಕುಸಿದು ಬಿದ್ದಿದ್ದಾರೆ.
ಹೆಲ್ಮೆಟ್ ಒಳಗೆ ತೂರಿದ್ದ ಚೆಂಡು ರಸೆಲ್ ಕಿವಿಗೆ ಅಪ್ಪಳಿಸಿತ್ತು. ತಕ್ಷಣವೇ ಮೈದಾನ ಸಿಬ್ಬಂದಿ ಅವರನ್ನು ಸ್ಟ್ರೆಚರ್ ನಲ್ಲಿ ಮಲಗಿಸಿ ವೈದ್ಯಕೀಯ ತಪಾಸಣೆಗೆ ಕರೆದೊಯ್ದಿತು. ಸ್ಕ್ಯಾನಿಂಗ್ ಮಾಡಿದ ಬಳಿಕ ಅವರು ಗಂಭೀರ ಅಪಾಯದಿಂದ ತಪ್ಪಿಸಿಕೊಂಡಿರುವುದು ಪತ್ತೆಯಾಯಿತು. ಈ ಘಟನೆ 2014 ರಲ್ಲಿ ಮೈದಾನದಲ್ಲಿಯೇ ಸಾವನ್ನಪ್ಪಿದ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಫಿಲಿಪ್ ಹ್ಯೂಸ್ ಘಟನೆಯನ್ನು ನೆನಪಿಸಿತು.