ಮುಂಬೈ: ಟೀಂ ಇಂಡಿಯಾದಲ್ಲಿರುವ ಕ್ರಿಕೆಟಿಗರಲ್ಲಿ ಯಾರೂ ಮುಸ್ಲಿಂ ಧರ್ಮಕ್ಕೆ ಸೇರಿದ ಕ್ರಿಕೆಟಿಗರಿಲ್ಲ ಯಾಕೆ? ಹೀಗೆಂದು ವ್ಯಕ್ತಿಯೊಬ್ಬ ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಕ್ಕೆ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ತಿರುಗೇಟು ನೀಡಿದ್ದಾರೆ.
ವಿಶೇಷವೆಂದರೆ ಈ ರೀತಿ ಪ್ರಶ್ನಿಸಿದ ವ್ಯಕ್ತಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್. ‘ಟೀಂ ಇಂಡಿಯಾದಲ್ಲಿ ಈಗೀಗ ಯಾಕೆ ಯಾರೂ ಮುಸ್ಲಿಂ ಆಟಗಾರರು ಇಲ್ಲ? ಸ್ವಾತಂತ್ರ್ಯ ನಂತರ ಯಾವತ್ತೂ ಹೀಗಾಗಿರಲಿಲ್ಲ?’ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಹರ್ಭಜನ್ ಸಿಂಗ್ ‘ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಯಾವುದೇ ಧರ್ಮವಿರಲಿ. ಭಾರತೀಯತೆಯ ಮುಂದೆ ಎಲ್ಲವೂ ಒಂದೇ. ಅಷ್ಟಕ್ಕೂ ತಂಡಕ್ಕೆ ಬೇಕಾಗಿರುವುದು ಒಳ್ಳೆಯ ಆಟಗಾರನೇ ಹೊರತು, ಧರ್ಮ ಮುಖ್ಯವಲ್ಲ’ ಎಂದು ಭಜಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ