ರಾಂಚಿ: ತೃತೀಯ ಟೆಸ್ಟ್ ಪಂದ್ಯದ ಕೊನೆಯ ದಿನ ರವಿಚಂದ್ರನ್ ಅಶ್ವಿನ್ ರನ್ನು ಜಾಸ್ತಿ ಬಳಸಿಕೊಳ್ಳದೇ ವಿರಾಟ್ ಕೊಹ್ಲಿ ತಪ್ಪು ಮಾಡಿದರು ಎಂದು ಟೀಕೆಗಳು ಕೇಳಿ ಬಂದಿತ್ತು. ಇದಕ್ಕೆ ಕೊಹ್ಲಿ ಸಮಜಾಯಿಷಿ ಕೊಟ್ಟಿದ್ದಾರೆ.
ಒಂದು ತುದಿಯಿಂದ ವೇಗಿಗಳು ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದರು. ಕಮೆಂಟರಿ ಎಂಡ್ ನಿಂದ ಸ್ಪಿನ್ನರ್ ಗಳು ಉತ್ತಮ ದಾಳಿ ಸಂಘಟಿಸುತ್ತಿದ್ದರು. ರವೀಂದ್ರ ಜಡೇಜಾ ಬಂದಾಗಲೆಲ್ಲಾ ಒಂದೆರಡು ವಿಕೆಟ್ ಕೀಳುತ್ತಿದ್ದರು. ಹಾಗಾಗಿ ಅವರನ್ನು ಅಲ್ಲಿಂದ ಕಿತ್ತು ಅಶ್ವಿನ್ ರನ್ನು ಆ ಸ್ಥಾನಕ್ಕೆ ಕರೆತರುವುದು ಬೇಡವೆನಿಸಿತು ಎಂದು ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.
ಹಾಗಿದ್ದರೂ, ವಿಶ್ವ ನಂ.1 ಬೌಲರ್ ನ್ನು ಕಡೆಗಣಿಸಿದ್ದರಿಂದಲೇ ಟೀಂ ಇಂಡಿಯಾಕ್ಕೆ ಬೇಕಾದಾಗ ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಗೆಲ್ಲುವ ಅವಕಾಶ ಕೈ ತಪ್ಪಿತು ಎಂದು ಕೊಹ್ಲಿ ಮೇಲೆ ಟೀಕೆಗಳಾಗುತ್ತಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ