ಮುಂಬೈ: ಟೀಂ ಇಂಡಿಯಾ ಏಕದಿನ ತಂಡಕ್ಕೆ ಹಿರಿಯ ಸ್ಪಿನ್ ಜೋಡಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾರನ್ನು ಕಡೆಗಣಿಸುತ್ತಿರುವುದು ಏಕೆ? ಇದಕ್ಕೆ ಸ್ವತಃ ನಾಯಕ ಕೊಹ್ಲಿ ಉತ್ತರಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ಮೊದಲು ಮಾತನಾಡಿದ ಅವರು ‘ಮುಂಬರುವ ವಿಶ್ವಕಪ್ ಗೆ ಮೊದಲು ನಮ್ಮ ಬಳಿ ಉತ್ತಮ ಬೌಲಿಂಗ್ ಕಾಂಬಿನೇಷನ್ ಬೇಕು. ಅಶ್ವಿನ್-ಜಡೇಜಾ ಕಳೆದ 6-7 ವರ್ಷಗಳಿಂದ ಕ್ರಿಕೆಟ್ ಆಡುತ್ತಲೇ ಇದ್ದಾರೆ.
ಇದೀಗ ಯುವ ಆಟಗಾರರು ಅವರ ಸ್ಥಾನದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದರಿಂದಾಗಿ ನಮಗೆ ಉತ್ತಮ ಬೌಲಿಂಗ್ ಆಯ್ಕೆ ಸಿಗುತ್ತಿದೆ. ಹೀಗಾಗಿಯೇ ಇವರಿಬ್ಬರನ್ನು ಕಣಕ್ಕಿಳಿಸಲಾಗುತ್ತಿದೆ’ ಎಂದು ಕೊಹ್ಲಿ ಹೇಳಿದ್ದಾರೆ. ಈ ನಡುವೆ ಆರಂಭಿಕರ ಸ್ಥಾನಕ್ಕೆ ಈ ಪಂದ್ಯದಲ್ಲಿ ಶಿಖರ್ ಧವನ್ ತಂಡಕ್ಕೆ ಮರಳಿರುವುದರಿಂದ ರೋಹಿತ್ ಶರ್ಮಾ ಜತೆಗೆ ಅವರೇ ಕಣಕ್ಕಿಳಿಯುತ್ತಾರೆ. ಅಜಿಂಕ್ಯಾ ರೆಹಾನೆ ನಮ್ಮ ಮೂರನೇ ಆಯ್ಕೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ