ನವದೆಹಲಿ: ಭಾರತ ತಂಡದ ಸೆನ್ಸೇಷನಲ್ ಕ್ರಿಕೆಟರ್ ಗಳ ಪೈಕಿ ಇದೀಗ ಮಹಿಳಾ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಹೆಸರೂ ಸೇರಿಕೊಂಡಿದೆ. ಅಂತಿಪ್ಪಾ ಆಂಗ್ರಿ ಯಂಗ್ ಕ್ರಿಕೆಟರ್ ಹರ್ಮನ್ ಮನಸ್ಸು ಕದ್ದವರೂ ಇದ್ದಾರಂತೆ! ಹಾಗಂತ ಅವರೇ ಹೇಳಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ತಮ್ಮ ಇಷ್ಟ ಕಷ್ಟಗಳನ್ನು ಹಂಚಿಕೊಂಡಿರುವ ಹರ್ಮನ್ ಮೊದಲ ಬಾರಿಗೆ ತಾವು ಇಷ್ಟಪಟ್ಟ ಹುಡುಗನೆಂದರೆ ಬಾಲಿವುಡ್ ನಟ ರಣಬೀರ್ ಕಪೂರ್ ಎಂದಿದ್ದಾರೆ. ಅವರೆಂದರೆ ಹರ್ಮನ್ ಗೆ ಅದೊಂಥರಾ ಇಷ್ಟವಂತೆ. ಮೈದಾನದಲ್ಲಿ ಗುರುಗುಟ್ಟುತ್ತಾ ಇರುವ ಹರ್ಮನ್ ಡ್ರೆಸ್ಸಿಂಗ್ ರೂಂನಲ್ಲಿ ಭಾರೀ ತುಂಟ ಹುಡುಗಿಯಂತೆ.
ವೇದಾ ಕೃಷ್ಣಮೂರ್ತಿ ಜತೆ ಸೇರಿಕೊಂಡು ಪಂಜಾಬಿ ನೃತ್ಯ ಮಾಡುವುದು, ಹೊಸದಾಗಿ ತಂಡಕ್ಕೆ ಬರುವವರನ್ನು ಡ್ಯಾನ್ಸ್ ಮಾಡುವಂತೆ ಚುಡಾಯಿಸುವುದು ಇತ್ಯಾದಿ ಮಾಡುತ್ತಿರುತ್ತಾರಂತೆ. ಡ್ರೆಸ್ಸಿಂಗ್ ರೂಂ ವಿಚಾರಕ್ಕೆ ಬಂದರೆ ಹರ್ಮನ್ ಹಿರಿಯಕ್ಕ ಜೂಲನ್ ಗೋಸ್ವಾಮಿ ಜತೆ ಸುಲಭವಾಗಿ ಅಡ್ಜಸ್ಟ್ ಆಗುತ್ತಾರಂತೆ. ಆದರೆ ನಾಯಕಿ ಮಿಥಾಲಿ ರಾಜ್ ಕೊಂಚ ಸೀರಿಯಸ್ ವ್ಯಕ್ತಿ. ಹಾಗಾಗಿ ಅವರ ಜತೆ ಮಾತನಾಡುವಾಗ ಭಯವಾಗುತ್ತಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ