ಲಂಡನ್: ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ರನೌಟ್ ತಪ್ಪಿಸಿಕೊಳ್ಳಬಹುದಿತ್ತು. ಆದರೂ ರನೌಟ್ ಆದರು ಎಂದು ಅವರ ಮೇಲೆ ಎಲ್ಲರಿಗೂ ಬೇಸರ ಮೂಡಿತ್ತು. ಆದರೆ ಈ ರೀತಿ ರನೌಟ್ ಆಗಲು ಕಾರಣವೇನೆಂದು ಮಿಥಾಲಿ ಬಿಚ್ಚಿಟ್ಟಿದ್ದಾರೆ.
ಅಂದು ಮಿಥಾಲಿ ನಿಧಾನವಾಗಿ ಓಡಿರದೇ ಇದ್ದಿದ್ದರೆ ರನೌಟ್ ತಪ್ಪಿಸಿಕೊಳ್ಳುತ್ತಿದ್ದರು. ಬಹುಶಃ ಭಾರತವನ್ನು ಸುರಕ್ಷಿತ ದಡಕ್ಕೆ ಮುಟ್ಟಿಸುತ್ತಿದ್ದರು. ಆದರೆ ಅವರು ನಿಧಾನವಾಗಿ ವಿಕೆಟ್ ಕೈ ಚೆಲ್ಲಿದ್ದು ಮಾತ್ರವಲ್ಲ, ವಿಶ್ವಕಪ್ ನ್ನೂ ಕಳೆದುಕೊಂಡರು. ಈ ಕಾರಣಕ್ಕೆ ಅವರು ಮ್ಯಾಚ್ ಫಿಕ್ಸಿಂಗ್ ಮಾಡಿದ್ದಿರಬಹುದು ಎಂದು ಆರೋಪ ಮಾಡಿದವರೂ ಇದ್ದಾರೆ.
ಆದರೆ ಈ ಆರೋಪಗಳಿಗೆಲ್ಲಾ ಮಿಥಾಲಿ ಉತ್ತರಿಸಿದ್ದಾರೆ. ಆವತ್ತು ನನ್ನ ಶೂ ಸಮಸ್ಯೆಯಾಗಿತ್ತು. ಓಡುವಾಗ ನನ್ನ ಶೂ ಮೊಳೆ ಕ್ರೀಸ್ ಗೆ ಅಂಟಿಕೊಂಡಿದ್ದರಿಂದ ಬೇಗ ಓಡಲಾಗಲಿಲ್ಲ. ಪೂನಂ ರನ್ ಗಾಗಿ ಕರೆದಾಗ ನಾನು ಓಡಿದೆ. ಆದರೆ ಅರ್ಧಕ್ಕೆ ತಲುಪಿದಾಗ ಶೂ ಸಮಸ್ಯೆಯಾಯಿತು. ಡೈವ್ ಮಾಡುವ ಪರಿಸ್ಥಿತಿಯಲ್ಲೂ ನಾನಿರಲಿಲ್ಲ’ ಎಂದು ಮಿಥಾಲಿ ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ