Publish Date: Fri, 20 Oct 2017 (08:46 IST)
Updated Date: Fri, 20 Oct 2017 (08:48 IST)
ಕರಾಚಿ: ತನ್ನನ್ನು ಹೊಗಳಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಅಮೀರ್ ಅಷ್ಟೇ ಅದ್ಭುತವಾದ ಪ್ರತಿಕ್ರಿಯೆ ನೀಡಿದ್ದಾರೆ.
ಅಮೀರ್ ಖಾನ್ ಜತೆಗಿನ ಸಂದರ್ಶನವೊಂದರಲ್ಲಿ ವಿಶ್ವದಲ್ಲಿ ತಾನು ಎದುರಿಸಲು ಕಷ್ಟಪಡುವ ಬೌಲರ್ ಗಳಲ್ಲಿ ಮೊಹಮ್ಮದ್ ಅಮೀರ್ ಮೊದಲಿಗರು ಎಂದು ಕೊಹ್ಲಿ ಹೊಗಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಅಮೀರ್ ‘ಜಗತ್ತಿಗೇ ಗೊತ್ತು ಕೊಹ್ಲಿ ಎಷ್ಟು ಶ್ರೇಷ್ಠ ಎಂದು. ಅವರ ವಿರುದ್ಧ ನೀವು ಸರ್ವಶ್ರೇಷ್ಠ ಪ್ರದರ್ಶನವನ್ನೇ ನೀಡಬೇಕಾಗುತ್ತದೆ. ಢಾಕಾದಲ್ಲಿ ನಡೆದ ಏಷ್ಯಾ ಕಪ್ ಪಂದ್ಯದಂತೆ, ಅವರಿಗೆ ಸಣ್ಣ ಅವಕಾಶ ನೀಡಿದರೂ ಪಂದ್ಯವನ್ನೇ ಕಸಿಯುತ್ತಾರೆ’ ಎಂದು ಪಾಕ್ ವೇಗಿ ಭಾರತದ ನಾಯಕನಿಗೆ ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ