ನಿವೃತ್ತ ಜೀವನದಲ್ಲಿ ಧೋನಿ ಏನು ಮಾಡಬಹುದು?

Webdunia
ಸೋಮವಾರ, 17 ಆಗಸ್ಟ್ 2020 (10:34 IST)
ರಾಂಚಿ: ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದಾರೆ. ಇನ್ನೀಗ ಅವರನ್ನು ಐಪಿಎಲ್ ನಲ್ಲಿ ಮಾತ್ರ ಕಾಣಬಹುದಾಗಿದೆ. ಅದೂ ಈ ವರ್ಷ ಅಥವಾ ಮುಂದಿನ ವರ್ಷ ಮಾತ್ರ ಎನ್ನಲಾಗುತ್ತಿದೆ. ಅದಾದ ಬಳಿಕ ಐಪಿಎಲ್ ನಿಂದಲೂ ಧೋನಿ ನಿವೃತ್ತರಾಗಬಹುದು ಎಂಬ ಮಾತು ಕೇಳಿಬರುತ್ತಿದೆ.


ಈ ನಡುವೆ ಧೋನಿ ನಿವೃತ್ತ ಜೀವನದಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಸ್ಪಷ್ಟ ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ಒಂದು ವರ್ಷದಿಂದ ಕ್ರಿಕೆಟ್ ನಿಂದ ದೂರವಿರುವಾಗ ಧೋನಿ ತಮ್ಮ ಮೆಚ್ಚಿನ ಫಾರ್ಮ್ ಹೌಸ್ ನಲ್ಲಿಯೇ ಬಹುಕಾಲ ಕಳೆದಿದ್ದರು.

ಈ ವೇಳೆ ಅವರಿಗೆ ಕೃಷಿಯ ಬಗ್ಗೆ ಅಪಾರ ಒಲವು ಮೂಡಿದೆ. ಸ್ವತಃ ಟ್ರ್ಯಾಕ್ಟರ್ ಖರೀದಿಸಿದ್ದು, ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಮಾಡುವುದಲ್ಲದೆ, ತಮ್ಮದೇ ಬ್ರ್ಯಾಂಡ್ ನ ಸಾವಯವ ಉತ್ಪನ್ನ ಹೊರತರುವ ಯೋಜನೆಯನ್ನೂ ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೆ, ಉದ್ಯಮದಲ್ಲೂ ಧೋನಿಗೆ ಅಪಾರ ಒಲವಿದೆ. ಹೀಗಾಗಿ ನಿವೃತ್ತ ಜೀವನದಲ್ಲಿ ಧೋನಿ ಸಂಪೂರ್ಣವಾಗಿ ಬೇರೆಯದೇ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು ಎಂದು ಊಹಿಸಲಾಗಿದೆ.

ಅವರ ಸ್ನೇಹಿತರ ಪ್ರಕಾರ ಧೋನಿ ಸೇನೆಯಲ್ಲಿ ಸೇವೆ ಸಲ್ಲಿಸಬಹುದು. ವಿಶ್ವಕಪ್ ನಿಂದ ಹೊರಬಿದ್ದ ತಕ್ಷಣ ಸುಮಾರು ಒಂದು ತಿಂಗಳ ಕಾಲ ಸೇನಾ ತರಬೇತಿ ಪಡೆದಿದ್ದ ಧೋನಿ 15 ದಿನಗಳ ಕಾಲ ಗಸ್ತುಪಡೆಯಲ್ಲೂ ಕಾರ್ಯನಿರ್ವಹಿಸಿದ್ದರು. ಈಗ ಮತ್ತೆ ಸೇನೆ ಸೇರುವ ಸಾಧ‍್ಯತೆಯೂ ಇಲ್ಲದಿಲ್ಲ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸೆಮಿಫೈನಲ್ ಗೆ ಮುನ್ನ ಸೂರ್ಯಕುಮಾರ್, ಬೌಲಿಂಗ್ ಕೋಚ್ ಗೆ ಗೆಲುವಿನ ಸೀಕ್ರೆಟ್ ಹೇಳಿದ್ದ ರೋಹಿತ್ ಶರ್ಮಾ

ಪಂದ್ಯ ಶ್ರೇಷ್ಠ ಪ್ರಶಸ್ತಿ ನನಗೆ ಅಲ್ಲ, ಅವರಿಗೆ ಸಿಗಬೇಕಿತ್ತು: ಸಂಜು ಸ್ಯಾಮ್ಸನ್ ಶಾಕಿಂಗ್ ಹೇಳಿಕೆ

Funny Video: ಕುಣೀಬೇಡ ಕಣಮ್ಮಾ.. ಅದು ಔಟ್ ಅಲ್ಲ: ಪತ್ನಿ ಸಾಕ್ಷಿಯನ್ನು ಕೂಲ್ ಡೌನ್ ಮಾಡಿದ ಧೋನಿ

T20 WC: ಬೇಕಿದ್ದಾಗಲೇ ಕೈ ಕೊಡುವ ಅಭಿಷೇಕ್ ಶರ್ಮಾ: ಹೀನಾಯ ದಾಖಲೆಯ ಪಟ್ಟಿ ಇಲ್ಲಿದೆ

IND vs ENG: ತವರು ನೆಲದಲ್ಲಿ ಆಂಗ್ಲರ ವಿರುದ್ಧ ಗೆದ್ದುಬೀಗಿದ ಭಾರತ, ಫೈನಲ್‌ಗೆ ಎಂಟ್ರಿ

ಮುಂದಿನ ಸುದ್ದಿ
Show comments