ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಜಾಹೀರಾತು ಲೋಕದಲ್ಲೂ ನಂ.1. ಕೊಹ್ಲಿ ಬ್ರಾಂಡ್ ವ್ಯಾಲ್ಯೂ ಈಗ ಎಷ್ಟು ಗೊತ್ತಾ? ಬರೋಬ್ಬರಿ 92 ಮಿಲಿಯನ್ ಡಾಲರ್!
ಟೀಂ ಇಂಡಿಯಾದ ಪೂರ್ಣ ಪ್ರಮಾಣದ ನಾಯಕನಾದ ಮೇಲೆ ಕೊಹ್ಲಿ ಬೆಲೆ 20 ರಿಂದ 25 ಶೇಕಡಾ ಹೆಚ್ಚಾಗಿದೆ ಎಂದು ಮಾರುಕಟ್ಟೆ ತಜ್ಞರು ಲೆಕ್ಕ ಹಾಕಿದ್ದಾರೆ. ಇದರಿಂದಾಗಿ ಕೊಹ್ಲಿ ಶಾರುಖ್ ಖಾನ್ ನಂತರದ ಸ್ಥಾನ ಪಡೆದಿದ್ದಾರೆ. ಶಾರುಖ್ ಮೌಲ್ಯ 131 ಮಿಲಿಯನ್ ಡಾಲರ್.
ಸದ್ಯ ಪ್ರಚಂಡ ಫಾರ್ಮ್ ನಲ್ಲಿರುವ ಕೊಹ್ಲಿ ಮುಂಬರುವ ಆಸ್ಟ್ರೇಲಿಯಾ ಸರಣಿಯಲ್ಲಿ ಅದೇ ರೀತಿಯ ಪ್ರದರ್ಶನ ಮುಂದುವರಿಸಿದರೆ ಅವರ ಮಾರುಕಟ್ಟೆ ಮೌಲ್ಯ ಇನ್ನಷ್ಟು ಹೆಚ್ಚಾಗಲಿದೆ. ಪ್ರಸಕ್ತ ಕೊಹ್ಲಿ ಸುಮಾರು 20 ಉತ್ಪನ್ನಗಳಿಗೆ ರಾಯಭಾರಿಯಾಗಿದ್ದಾರೆ. ಅವರ ಬ್ಯಾಟಿಂಗ್ ಕ್ಲಿಕ್ ಆದಂತೆ ಮಾರುಕಟ್ಟೆ ಮೌಲ್ಯವೂ ಹೆಚ್ಚಾಗಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ