ಹೈದರಾಬಾದ್: ತೆಲಂಗಾಣ ಸರ್ಕಾರದಿಂದ ಬಹುಮಾನ ರೂಪದಲ್ಲಿ ಪಡೆದ ಹಣಕ್ಕೆ ತೆರಿಗೆ ಕಟ್ಟದೆ ವಿವಾದಕ್ಕೊಳಗಾಗಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿದೇಶದಲ್ಲಿದ್ದುಕೊಂಡೇ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ನಾನು ಯಾವುದೇ ತೆರಿಗೆ ವಂಚನೆ ಮಾಡಿಲ್ಲ. ತೆಲಂಗಾಣ ಸರ್ಕಾರ ನನಗೆ 1 ಕೋಟಿ ರೂಪಾಯಿಗಳನ್ನು ಟೆನಿಸ್ ತರಬೇತಿಗಾಗಿ ಭತ್ಯೆ ರೂಪದಲ್ಲಿ ನೀಡಿತ್ತು. ಇದು ರಾಜ್ಯದ ರಾಯಭಾರಿಯಾಗಿದ್ದಕ್ಕೆ ನೀಡಿದ ಬಹುಮಾನ ಹಣವಲ್ಲ ಎಂದು ಸಾನಿಯಾ ಸ್ಪಷ್ಟಪಡಿಸಿದ್ದಾರೆ.
ತೆರಿಗೆ ಇಲಾಖೆಯ ಆದಾಯ ತೆರಿಗೆ ವಿಭಾಗ ಸಾನಿಯಾಗೆ ಖುದ್ದಾಗಿ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಸಾನಿಯಾ ವಿದೇಶ ಪ್ರವಾಸದಲ್ಲಿರುವ ಕಾರಣ ಆಕೆಯ ಪರವಾಗಿ ಅಕೌಂಟೆಂಟ್ ದಾಖಲೆಗಳ ಸಮೇತ ಅಧಿಕಾರಿಗಳ ಎದುರು ಹಾಜರಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ