Publish Date: Wed, 14 Feb 2018 (10:59 IST)
Updated Date: Wed, 14 Feb 2018 (11:01 IST)
ಪೋರ್ಟ್ ಎಲಿಜಬೆತ್: ಏಕದಿನ ಸರಣಿ ಗೆದ್ದ ಖುಷಿಯಲ್ಲಿರುವ ಟೀಂ ಇಂಡಿಯಾ ನಾಯಕ ಗೆಲುವಿನಿಂದ ಮೈ ಮರೆಯದೆ ಎದುರಾಳಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ!
ಭಾರತ ಈಗಾಗಲೇ ಸರಣಿಯಲ್ಲಿ 4-1 ಅಂತರದಿಂದ ಮುನ್ನಡೆ ಸಾಧಿಸಿದ್ದು, ಮುಂದಿನ ಏಕೈಕ ಪಂದ್ಯದ ಫಲಿತಾಂಶ ಸರಣಿ ಗೆಲುವಿನ ಮೇಲೆ ಪರಿಣಾಮ ಬೀರದು.
ಹಾಗಾಗಿ ಕೊಹ್ಲಿ ಮುಂದಿನ ಪಂದ್ಯವನ್ನು ಔಪಚಾರಿಕವೆಂದು ಪರಿಗಣಿಸಿ ಹಗುರವಾಗಿ ಕಾಣಬಹುದು ಎಂದು ಎದುರಾಳಿಗಳು ಲೆಕ್ಕಾಚಾರ ಹಾಕಿದ್ದರೆ ತಪ್ಪಾಗಬಹುದು. ನಾವು 5-1 ಅಂತರದಿಂದ ಸರಣಿ ಗೆಲ್ಲಲು ಇಷ್ಟಪಡುತ್ತೇವೆ. ಯಾವುದೇ ಕಾರಣಕ್ಕೂ ಮುಂದಿನ ಪಂದ್ಯವನ್ನು ಹಗುರವಾಗಿ ಕಂಡು ಲೆಕ್ಕ ಭರ್ತಿಗೆ ತಂಡ ಕಣಕ್ಕಿಳಿಸುವುದಿಲ್ಲ. ಪ್ರಬಲ ಪೈಪೋಟಿಯೇ ನೀಡುತ್ತೇವೆ ಎಂದು ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
Krishnaveni
Publish Date: Wed, 14 Feb 2018 (10:59 IST)
Updated Date: Wed, 14 Feb 2018 (11:01 IST)