Publish Date: Tue, 16 Jan 2018 (08:29 IST)
Updated Date: Tue, 16 Jan 2018 (08:31 IST)
ಸೆಂಚೂರಿಯನ್: ವಿರಾಟ್ ಕೊಹ್ಲಿ ಎಂದರೆ ಹಾಗೇ. ಅವರು ಎದುರಾಳಿಗಳಿಗೆ ಬ್ಯಾಟ್ ನಿಂದ ಮಾತ್ರವಲ್ಲ, ಮಾತಿನಲ್ಲೂ ಎದಿರೇಟು ಕೊಡುವಲ್ಲಿ ಫೇಮಸ್ಸು. ಇದೀಗ ದ.ಆಫ್ರಿಕಾ ಬೌಲರ್ ಕಗಿಸೋ ರಬಾಡಾಗೂ ಅದೇ ಅನುಭವವಾಗಿದೆ.
ದ್ವಿತೀಯ ದಿನ ವಿರಾಟ್ ಕೊಹ್ಲಿಯನ್ನು ಕೆಣಕಿದ್ದ ಕಗಿಸೊ ರಬಾಡಾಗೆ ಅದರ ಬಿಸಿ ಅನುಭವವಾಗಿದೆ. ವಿರಾಟ್ ತೃತೀಯ ದಿನವೂ ತಮ್ಮ ಕಗಿಸೋ ಮೇಲೆ ತಮ್ಮ ಮಾತಿನ ಏಟು ಮುಂದುವರಿಸಿದ್ದಾರೆ.
ಬೌಲಿಂಗ್ ಮಾಡುತ್ತಿದ್ದ ರಬಾಡಾರನ್ನು ಸನ್ನೆಯ ಮೂಲಕ ಇದೇ ರೀತಿ ಇನ್ನೊಂದು ಬೌಂಡರಿ ಹೊಡೆಯಬಲ್ಲೆ ಎಂದು ಒಮ್ಮೆ ಹೇಳಿದರೆ ಇನ್ನೊಮ್ಮೆ ಅಶ್ವಿನ್ ಬೌಂಡರಿ ಹೊಡೆದಾಗಲೂ ರಬಾಡಾಗೆ ಸ್ಲೆಡ್ಜಿಂಗ್ ಮಾಡಿದರು. ಆದರೆ ರಬಾಡಾ ಎರಡೂ ಬಾರಿಯೂ ಪ್ರತಿಕ್ರಿಯಿಸಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ