ನವದೆಹಲಿ: ಡಬ್ಲ್ಯುಪಿಎಲ್ ಬೇರೆ ವಿಷಯ. ಆದರೆ, ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ನೀಡಿರುವ ಕೊಡುಗೆ ಗಮನಾರ್ಹವಾಗಿದೆ. ನನ್ನ ವೃತ್ತಿಜೀವನ ಮತ್ತು ಅವರ ಸಾಧನೆಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಸ್ಮೃತಿ ಮಂದಾನ ಹೇಳಿದ್ದಾರೆ.
ಡಬ್ಯ್ಲುಪಿಎಲ್ನಲ್ಲಿ ಫೈನಲ್ನಲ್ಲಿ ಡೆಲ್ಲಿ ತಂಡವನ್ನು ಮಣಿಸಿ ಆರ್ಸಿಬಿ ಮಹಿಳಾ ತಂಡ ಟ್ರೋಫಿಯನ್ನು ಗೆದ್ದಿತು. ಪುರುಷರ ತಂಡ ಕಳೆದ 16 ವರ್ಷಗಳಿಂದ ಮಾಡಲಾದ ಸಾಧನೆಯನ್ನು ಮಹಿಳಾ ತಂಡ ಮಾಡಿತು.
ಬೆಂಗಳೂರು ರಾಯಲ್ ಚಾಲೆಂಜರ್ಸ್ ಅಭಿಮಾನಿಗಳು ಕೊನೆಗೂ ಕಪ್ ತಂದುಕೊಟ್ಟ ಮಹಿಳಾ ತಂಡವನ್ನು ಕೊಂಡಾಡಿದರು. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ಜತೆ ಹೋಲಿಕೆ ಮಾಡುವುದು ಸರಿಯಲ್ಲ. ಅವರ ಸಾಧನೆ ನಮ್ಮ ಕ್ರಿಕೆಟ್ ಮೋಘವಾಗಿದೆ ಎಂದರು.
ಕಳೆದ 16 ವರ್ಷಗಳಿಂದ ಐಪಿಎಲ್ನಲ್ಲಿ ಪುರುಷರ ತಂಡವು ಅತ್ಯುತ್ತಮವಾಗಿ ಆಡುತ್ತಿದೆ. ಕಪ್ ಅವರಿಗೆ ಸಿಕ್ಕಿಲ್ಲ ಎಂಬ ಮಾತ್ರಕ್ಕೆ ಅವರು ಉತ್ತಮವಾಗಿ ಆಡಿಲ್ಲ ಎಂದು ಅರ್ಥವಲ್ಲ. ಈ ಹೋಲಿಕೆ ಸರಿಯಾದುದಲ್ಲ. ಆರ್ಸಿಬಿ ಒಂದು ಫ್ರಾಂಚೈಸಿ. ಮಹಿಳೆಯರ ಮತ್ತು ಪುರುಷರ ತಂಡಗಳನ್ನು ಬೇರೆ ಬೇರೆಯಾಗಿ ನೋಡಿರಿ. ಏಕೆಂದರೆ, ಹೋಲಿಕೆ ನಮಗೆ ಬೇಕಿಲ್ಲ ಎಂದು ಸ್ಮೃತಿ ಹೇಳಿದ್ದಾರೆ.