Publish Date: Fri, 20 Apr 2018 (07:15 IST)
Updated Date: Fri, 20 Apr 2018 (07:17 IST)
ಬೆಂಗಳೂರು: ಸದ್ಯಕ್ಕೆ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಮತ್ತು ಧೋನಿ ತಮ್ಮ ತಮ್ಮ ತಂಡದ ಜತೆ ಬ್ಯುಸಿ. ಕೊಹ್ಲಿಯ ಹಾಗೆ ಧೋನಿ ಕೂಡಾ ಭರ್ಜರಿ ಬ್ಯಾಟಿಂಗ್ ನಿಂದ ಗಮನ ಸೆಳೆದಿದ್ದಾರೆ.
ಆದರೆ ಧೋನಿ ಮೇಲಿನ ಟೀಕೆಗಳೇನೂ ಕಡಿಮೆಯಾಗಿಲ್ಲ. ಕೆಲವರು ಟೀಂ ಇಂಡಿಯಾದಿಂದ ಅವರು ನಿವೃತ್ತಿ ಹೊಂದಬೇಕು ಎನ್ನುವವರಿದ್ದಾರೆ. ಅದರ ಬಗ್ಗೆ ಮಾತೇ ಆಡಲ್ಲವಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.
‘ನಾವೂ ಹೊರಗಿನವರಂತೆ ಧೋನಿ ಬಗ್ಗೆ ಮಾತಾಡುತ್ತಿದ್ದರೆ ಭಾರತೀಯ ಕ್ರಿಕೆಟ್ ಗೇ ಅಪಾಯ ಕಟ್ಟಿಟ್ಟ ಬುತ್ತಿ. ನಮ್ಮೊಳಗಿನ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದು ನಮಗೆ ಮಾತ್ರ ಗೊತ್ತು. ನಾವು ಸೋತಾಗ ಅಥವಾ ಗೆದ್ದಾಗ ಕೆಲವರು ನಮ್ಮ ತಂಡದಲ್ಲಿ ಬಿರುಕಿದೆಯಾ ಎಂದು ಹುಳುಕು ಹುಡುಕುತ್ತಲೇ ಇರುತ್ತಾರೆ. ಅಂತಹ ವಿಷಯಗಳ ಬಗ್ಗೆ ಮಾತನಾಡಲ್ಲ’ ಎಂದು ಕೊಹ್ಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.