Publish Date: Wed, 18 Aug 2021 (10:29 IST)
Updated Date: Wed, 18 Aug 2021 (10:31 IST)
ಲಂಡನ್: ಟೀಂ ಇಂಡಿಯಾ ನಾಯಕ, ರನ್ ಮೆಷಿನ್ ವಿರಾಟ್ ಕೊಹ್ಲಿ ಪಾಲಿಗೆ ಇಂದು ವಿಶೇಷ ದಿನ. ಇದೇ ದಿನ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.
2008 ಆಗಸ್ಟ್ 18 ರಂದು ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದ ಮೂಲಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಕಾಲಿಟ್ಟಿದ್ದರು. ಈ ಪಂದ್ಯದಲ್ಲಿ ಅವರು ಗಳಿಸಿದ್ದು ಕೇವಲ 12 ರನ್.
ಹಾಗಿದ್ದರೂ ಬಳಿಕ ಅವರು ಭಾರತದ ರನ್ ಮೆಷಿನ್ ಆಗಿ ಬದಲಾಗಿದ್ದು ಇತಿಹಾಸ. ಆರಂಭದಲ್ಲಿ ಸಾಮಾನ್ಯ ಆಟಗಾರನಾಗಿದ್ದ ಕೊಹ್ಲಿ ಬಳಿಕ ತಮ್ಮ ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದಲ್ಲದೆ, ಆಟದಲ್ಲಿ ಸಾಕಷ್ಟು ಸುಧಾರಣೆ ಮಾಡಿದ್ದರು. ಇಂದು ವಿಶ್ವದ ದಿಗ್ಗಜ ಬ್ಯಾಟ್ಸ್ ಮನ್ ಗಳ ಸಾಲಿನಲ್ಲಿ ಸ್ಥಾನ ಪಡೆದಿರುವುದು ಅವರ ಹೆಗ್ಗಳಿಕೆ.