ಕೊಲೊಂಬೊ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಗಳಿಸಿದ್ದರು. ಇದೀಗ ಹೊಸ ದಾಖಲೆಯ ಹೊಸ್ತಿಲಲ್ಲಿದ್ದಾರೆ.
ನಾಳೆ ಶ್ರೀಲಂಕಾ ವಿರುದ್ಧ ಭಾರತ ದ್ವಿತೀಯ ಏಕದಿನ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಕೊಹ್ಲಿ 45 ರನ್ ಗಳಿಸಿದರೆ ಈ ವರ್ಷದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ದಾಖಲೆ ಬರೆಯಲಿದ್ದಾರೆ.
ಸದ್ಯ ಅತೀ ಹೆಚ್ಚು ರನ್ ಗಳಿಸಿದವರ ಪೈಕಿ ದ. ಆಫ್ರಿಕಾದ ಫಾ ಡು ಪ್ಲೆಸಿಸ್ ಮೊದಲ ಮತ್ತು ಇಂಗ್ಲೆಂಡ್ ನ ಜೋ ರೂಟ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಪ್ಲೆಸಿಸ್ 16 ಪಂದ್ಯಗಳಿಂದ 814 ರನ್ ಗಳಿಸಿದ್ದಾರೆ. ರೂಟ್ 14 ಪಂದ್ಯಗಳಿಂದ 785 ರನ್ ಗಳಿಸಿದ್ದಾರೆ. ಕೊಹ್ಲಿ ಸದ್ಯಕ್ಕೆ 14 ಪಂದ್ಯಗಳಿಂದ 769 ರನ್ ಗಳಿಸಿದ್ದಾರೆ.