ಅತಿಥೇಯ ಭಾರತ-ಶ್ರೀಲಂಕಾ ತಂಡಗಳ ನಡುವೆ ನಡೆಯುತ್ತಿರುವ ಐದು ಏಕದಿನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಲಂಕಾ ತಂಡ 43.2 ಓವರ್‌ಗಳಲ್ಲಿ 216 ರನ್‌ಗಳನ್ನು ಪೇರಿಸಿ, ಎದುರಾಳಿ ಭಾರತ ತಂಡಕ್ಕೆ ಗೆಲುವಿಗಾಗಿ 217 ರನ್‌ಗಳ ಸವಾಲೊಡ್ಡಿದೆ.
ನಿರೋಶನ್ ಡಿಕ್‌ವೆಲ್ಲಾ 74 ಎಸೆತಗಳಲ್ಲಿ 64 ರನ್ ಗಳಿಸುವ ಮೂಲಕ ಭರ್ಜರಿ ಅರ್ಧಶತಕ ದಾಖಲಿಸಿದರು. ಡ್ಯಾನ್ ಕೂಡಾ ಉತ್ತಮ ಪ್ರದರ್ಶನ ನೀಡಿದರಾದರೂ 44 ಎಸೆತಗಳನ್ನು ಎದುರಿಸಿ 35 ರನ್‌ಗಳಿಸಲು ಮಾತ್ರ ಶಕ್ತರಾದರು.
ಕುಸಲ್ ಮೆಂಡಿಸ್ 37 ಎಸೆತಗಳನ್ನು ಎದುರಿಸಿ 36 ರನ್ ಗಳಿಸಿದರು. ಉಪುಲ್ ತರಂಗ 23 ಎಸೆತಗಳನ್ನು ಎದುರಿಸಿ 13 ರನ್ ಬಾರಿಸಿದರು. ಏಂಜೆಲೋ ಮ್ಯಾಥ್ಯೂಸ್ 50 ಎಸೆತಗಳನ್ನು ಎದುರಿಸಿ 36 ರನ್‌ಗಳಿಸಿ ಅಜೇಯರಾಗಿ ಉಳಿದರು.
ನಂತರ ಬಂದ ಯಾವೊಬ್ಬ ಆಟಗಾರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಕ್ಯಾಪ್ಟನ್ ಉಪ್ಪಲ್ ತರಂಗಾ(13), ಚಾಮರ ಕಪುಗೆದರ(1), ವನಿಂದು ಹಸರಂಗ(2), ತಿಸಾರ ಪೆರೇರಾ(0), ಲಕ್ಷಣ ಸಂದಕನ(5), ಲಸಿತ್ ಮಲಿಂಗಾ(8), ವಿಶ್ವ ಫೆರ್ನಾಂಡೊ(0) ಅಲ್ಪ ಮೊತ್ತಕ್ಕೆ ಔಟಾಗಿ ಪೆವಿಲಿಯನ್‌ಗೆ ಮರಳಿದರು.
ಕೊನೆಯದಾಗಿ ತಂಡ 43.2 ಓವರ್‌ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 216ರನ್ ಗಳಿಸಲು ಮಾತ್ರ ಶಕ್ತವಾಯಿತು. ಭಾರತದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಜಸ್‌ಪ್ರೀತ್ ಬೂಮ್ರಾ, ಯಜುವೇಂದ್ರ ಚಹಾಲ್ ಹಾಗೂ ಕೇದಾರ್ ಜಾಧವ್ ತಲಾ 2 ವಿಕೆಟ್ ಪಡೆದುಕೊಂಡರೆ, ಅಕ್ಸರ್ ಪಟೇಲ್ 3 ವಿಕೆಟ್ ಪಡೆದುಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.