Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೊಲೊಂಬೊ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಂಭತ್ತರ ಸಂಭ್ರಮದಲ್ಲಿದ್ದಾರೆ. ಅಂದರೆ ತಮ್ಮ ವೃತ್ತಿ ಜೀವನ ಒಂಭತ್ತು ವರ್ಷ ಪೂರೈಸಿದ ಖುಷಿಯಲ್ಲಿದ್ದಾರೆ.
ಈ ಸಂಭ್ರಮದ ಹಿನ್ನಲೆಯಲ್ಲಿ ಟ್ವಿಟರ್ ನಲ್ಲಿ ಸ್ಪೆಷಲ್ ಫೋಟೋ ಪ್ರಕಟಿಸಿರುವ ವಿರಾಟ್, ಅಭಿಮಾನಿಗಳೊಂದಿಗೆ ಖುಷಿ ಹಂಚಿಕೊಂಡಿದ್ದಾರೆ.
ಇಂದಿಗೆ ಸರಿಯಾಗಿ ಒಂಭತ್ತು ವರ್ಷಗಳ ಹಿಂದೆ ಕೊಹ್ಲಿ ಲಂಕಾ ವಿರುದ್ಧ ಏಕದಿನ ಪಂದ್ಯದ ಮೂಲಕ ಕ್ರಿಕೆಟ್ ಪದಾರ್ಪಣೆ ಮಾಡಿದ್ದರು. ಅದೂ ದಂಬುಲಾದಲ್ಲಿ. ವಿಶೇಷವೆಂದರೆ ಅದೇ ದಂಬುಲಾ ಮೈದಾನದಲ್ಲಿ ಕೊಹ್ಲಿ ನಾಳೆ ಏಕದಿನ ಪಂದ್ಯವಾಡಲಿದ್ದಾರೆ. ಅಂದು ಚಿಗುರು ಮೀಸೆಯ ಹುಡುಗನಾಗಿದ್ದ ಕೊಹ್ಲಿ ಇಂದು ನಾಯಕನಾಗಿ ತಂಡ ಮುನ್ನಡೆಸುತ್ತಿರುವುದು ವಿಶೇಷ.