Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಧೋನಿ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಬೇಕು 25 ರನ್

ಧೋನಿ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಬೇಕು 25 ರನ್
ಹ್ಯಾಮಿಲ್ಟನ್ , ಬುಧವಾರ, 29 ಜನವರಿ 2020 (09:09 IST)
ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ತೃತೀಯ ಟಿ20 ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.


ವಿರಾಟ್ ಕೊಹ್ಲಿ ಇಂದು 25 ರನ್ ಗಳಿದರೆ ಧೋನಿ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ನಾಯಕರಾಗಿ ಅತೀ ಹೆಚ್ಚು ರನ್ ಗಳಿಸಿದ ವಿಶ್ವ ನಾಯಕರ ಪೈಕಿ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ. 1112 ರನ್ ಗಳಿಸಿರುವ ಧೋನಿ ಮೂರನೇ ಸ್ಥಾನದಲ್ಲಿದ್ದರೆ, 1148 ರನ್ ಗಳಿಸಿದ ನ್ಯೂಜಿಲೆಂಡ್ ನಾಯಕ ಕೇನ್ಸ್ ವಿಲಿಯಮ್ಸ್ ದ್ವಿತೀಯ ಮತ್ತು ದ.ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ 1273 ರನ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಇಂದು 25 ರನ್ ಗಳಿಸಿದರೆ ಧೋನಿಯನ್ನು ಹಿಂದಿಕ್ಕಿ ಭಾರತೀಯ ನಾಯಕರ ಪೈಕಿ ಮೊದಲ ಸ್ಥಾನ ಮತ್ತು ವಿಶ್ವ ನಾಯಕರ ಪೈಕಿ ಮೂರನೇ ಸ್ಥಾನಕ್ಕೇರಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹ್ಯಾಮಿಲ್ಟನ್ ನಲ್ಲಿ ದಾಖಲೆ ಬರೆಯಲು ಸಜ್ಜಾದ ಟೀಂ ಇಂಡಿಯಾ