Publish Date: Sat, 27 Jul 2019 (09:57 IST)
Updated Date: Sat, 27 Jul 2019 (10:00 IST)
ಮುಂಬೈ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪತ್ನಿಗೆ ಗೃಹ ಹಿಂಸೆ ನೀಡಿದ ಆರೋಪ ವಿಚಾರಣೆಯಲ್ಲಿರುವುದರಿಂದ ಅಮೆರಿಕಾ ಅವರಿಗೆ ವೀಸಾ ನಿರಾಕರಿಸಿದ ಘಟನೆ ನಡೆದಿದೆ.
ಕೊನೆಗೆ ಬಿಸಿಸಿಐ ಮಧ್ಯ ಪ್ರವೇಶಿಸಿ ಹಿರಿಯ ವೇಗಿಯ ಸಾಧನೆಗಳನ್ನು ಮನದಟ್ಟು ಮಾಡಿದ ಮೇಲೆ ಅಮೆರಿಕಾ ವೀಸಾ ಒದಗಿಸಲು ಒಪ್ಪಿದೆ.
ಅಮೆರಿಕಾ ರಾಯಭಾರ ಕಚೇರಿಗೆ ಪತ್ರ ಬರೆದ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ, ಮೊಹಮ್ಮದ್ ಶಮಿಯ ವೃತ್ತಿ ಜೀವನದ ಸಾಧನೆಗಳು, ಅವರ ಮೇಲಿನ ಪ್ರಕರಣದ ತನಿಖೆಯ ವರದಿಯ ಸಾರಾಂಶಗಳನ್ನು ವಿವರಿಸಿದ ಮೇಲೆ ಇದೀಗ ವೀಸಾ ಕೊಡಲು ಒಪ್ಪಿದೆ.