ಚೆನ್ನೈ: ಅದ್ಯಾಕೋ ಭಾರತದ ವಿರುದ್ದದ ಸರಣಿಯಲ್ಲಿ ಅಲೆಸ್ಟರ್ ಕುಕ್ ಗೆ ಈ ಬೌಲರ್ ಸಿಂಹ ಸ್ವಪ್ನರಾದರು. ಅದು ಬ್ಯಾಟಿಂಗ್ ಪಿಚ್ ಇರಲಿ, ಬೌಲಿಂಗ್ ಪಿಚ್ ಇರಲಿ. ಎಲ್ಲಾ ಪಂದ್ಯಗಳಲ್ಲೂ ಕುಕ್ ಔಟ್ ಮಾಡಿದ ಖ್ಯಾತಿ ಟೀಂ ಇಂಡಿಯಾದ ಈ ಬೌಲರ್ ನದ್ದು.
ಐದು ಪಂದ್ಯಗಳ ಈ ಸರಣಿಯಲ್ಲಿ ಕುಕ್ 12 ಬಾರಿ ಬ್ಯಾಟಿಂಗ್ ಮಾಡಿದ್ದಾರೆ. ಅದರಲ್ಲಿ ಆರು ಬಾರಿ ಅವರ ವಿಕೆಟ್ ಕಿತ್ತ ದಾಖಲೆ ಮಾಡಿದ್ದು ರವೀಂದ್ರ ಜಡೇಜಾ. ಅಂದ ಹಾಗೆ ಜಡೇಜಾ ಈ ರೀತಿ ಒಂದೇ ಸರಣಿಯಲ್ಲಿ ಅತೀ ಹೆಚ್ಚು ಬಾರಿ ಒಬ್ಬ ಬ್ಯಾಟ್ಸ್ ಮನ್ ಔಟ್ ಮಾಡಿದ್ದು ಇದೇ ಮೊದಲಲ್ಲ. 2015 ರ ಆಸ್ಟ್ರೇಲಿಯಾ ಸರಣಿಯಲ್ಲೂ ಮೈಕಲ್ ಕ್ಲಾರ್ಕ್ ರನ್ನ ಐದು ಬಾರಿ ಔಟ್ ಮಾಡಿದ ಹೆಗ್ಗಳಿಕೆ ಅವರಿಗಿದೆ.
ಇದೇ ವೇಳೆ ರವಿಚಂದ್ರನ್ ಅಶ್ವಿನ್ ಕೂಡಾ ಈ ಸರಣಿಯಲ್ಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಬೇರ್ ಸ್ಟೋ ರನ್ನು ಐದು ಬಾರಿ ಔಟ್ ಮಾಡಿದ್ದಾರೆ. ಆದರೆ ಈ ಪಂದ್ಯದಲ್ಲಿ ಮತ್ತೊಂದು ಬಾರಿ ಔಟ್ ಮಾಡುವ ಚಾನ್ಸ್ ಅವರಿಗೆ ಸಿಗಲಿಕ್ಕಿಲ್ಲ. ಯಾಕೆಂದರೆ ಬೇರ್ ಸ್ಟೋ ಕೆಳ ಕ್ರಮಾಂಕದಲ್ಲಿ ಆಡಲಿಳಿಯುತ್ತಾರೆ. ಅಲ್ಲಿಯವರೆಗೆ ಇಂಗ್ಲೆಂಡ್ ಬ್ಯಾಟಿಂಗ್ ಇರಬಹುದು ಎಂದು ಹೇಳಲಾಗದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ