ಬೆಂಗಳೂರು: ರಾಬಿನ್ ಉತ್ತಪ್ಪ ಕರ್ನಾಟಕ ರಣಜಿ ತಂಡದಲ್ಲಿ ಅವಿಭಾಜ್ಯ ಸದಸ್ಯನಿದ್ದಂತೆ. ಅವರು ಹಿರಿಯ ಆಟಗಾರ, ಅನುಭವಿ ಆಟಗಾರ ಎನ್ನುವ ಕಾರಣಕ್ಕೆ ಪ್ರಮುಖ ಟೂರ್ನಿಗಳಿಗೆ ಅವರನ್ನು ಕೈ ಬಿಡುವುದೇ ಇಲ್ಲ. ಆದರೆ ಈ ಬಾರಿ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಗಳಿಗೆ ಅವರನ್ನು ತಂಡದಿಂದ ಹೊರ ಹಾಕಲಾಗಿದೆ.
ಡಿಸೆಂಬರ್ 23 ರಿಂದ ವಿಶಾಖಪಟ್ಟಣದಲ್ಲಿ ತಮಿಳು ನಾಡು ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ. ಇದಕ್ಕೆ ಈಗಾಗಲೇ ಟೀಂ ಇಂಡಿಯಾದಲ್ಲಿ ಆಡುತ್ತಿರುವ ಕರುಣ್ ನಾಯರ್, ಕೆ ಎಲ್ ರಾಹುಲ್, ಮನೀಶ್ ಪಾಂಡೆ ತಂಡಕ್ಕೆ ಮರಳಲಿದ್ದಾರೆ.
ಇವರೆಲ್ಲಾ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಅಲ್ಲದೆ ಈ ಮೂವರೂ ಆರಂಭಿಕರಾಗಿದ್ದಾರೆ. ಹೀಗಿರುವಾಗ ಕಳಪೆ ಫಾರ್ಮ್ ನಲ್ಲಿರುವ ರಾಬಿನ್ ಉತ್ತಪ್ಪಗೆ ತಂಡದಲ್ಲಿ ಕೆಲಸವಿಲ್ಲ. ಹೀಗಾಗಿ 13 ಮಂದಿ ಸದಸ್ಯರ ತಂಡದಿಂದ ಅವರನ್ನು ಕೈ ಬಿಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ