ಲಂಡನ್: ಚಾಂಪಿಯನ್ಸ್ ಟ್ರೋಫಿಯಲ್ಲಿ ಮಹತ್ವದ ಸೆಮಿಫೈನಲ್ ಪಂದ್ಯವಾಡಲಿರುವ ಟೀಂ ಇಂಡಯಾ ಆಟಗಾರರು ರಿಲ್ಯಾಕ್ಸ್ ಮಾಡಿಕೊಂಡರು.
ಅದಕ್ಕಾಗಿ ಲಂಡನ್ ನಿಂದ ಬರ್ಮಿಂಗ್ ಹ್ಯಾಮ್ ವರೆಗೆ ವಿರಾಟ್ ಕೊಹ್ಲಿ ತಮ್ಮ ಹುಡುಗರ ಪಡೆಯೊಂದಿಗೆ ಸುತ್ತಾಡಿದರು. ಸಖತ್ ಸ್ಟೈಲಿಶ್ ಡ್ರೆಸ್ ನಲ್ಲಿ ಮಿಂಚಿದ ಬ್ಯಾಚುಲರ್ ಕ್ರಿಕೆಟಿಗರಿಗೆ ನಾಯಕ ವಿರಾಟ್ ಕೊಹ್ಲಿ ನೇತೃತ್ವ ವಹಿಸಿದರು.
ಇಂಗ್ಲೆಂಡ್ ನಲ್ಲಿ ನಗರ ಸುತ್ತಾಟ ನಡೆಸಿ ಜಾಲಿ ಮಾಡಿರುವ ಆಟಗಾರರ ಫೋಟೋಗಳನ್ನು ಸ್ವತಃ ಕೊಹ್ಲಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ. ಅತ್ತ ಕುಟುಂಬ ಸಮೇತ ಆಗಮಿಸದ್ದ ಕ್ರಿಕೆಟಿಗರು ತಮಗೆ ಸಿಕ್ಕ ಬಿಡುವಿನ ವೇಳೆಯನ್ನು ಪತ್ನಿ, ಮಕ್ಕಳ ಜತೆ ಕಾಲ ಕಳೆದು ರಿಲ್ಯಾಕ್ಸ್ ಆದರು.
ದ. ಆಫ್ರಿಕಾ ಪಂದ್ಯಕ್ಕೆ ಮೊದಲು ಪತ್ನಿ ಮತ್ತು ಮಗಳ ಜತೆ ರೆಸ್ಟೋರೆಂಟ್ ಗೆ ಹೋಗಿದ್ದ ಧೋನಿ, ಸೆಮಿಫೈನಲ್ ಪಂದ್ಯಕ್ಕೆ ಮೊದಲು ಕುಟುಂಬ ಸಮೇತರಾಗಿ ಬರ್ಮಿಂಗ್ ಹ್ಯಾಂ ಸುತ್ತಾಡಿದ್ದಾರೆ.