Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಚೇಸಿಂಗ್ ವೀರ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಚೇಸಿಂಗ್ ವೀರ!

ಕೃಷ್ಣವೇಣಿ ಕೆ

ಲಂಡನ್ , ಸೋಮವಾರ, 12 ಜೂನ್ 2017 (09:15 IST)
ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಚೇಸಿಂಗ್ ಮಾಡಲು ಸಿಕ್ಕರೆ ಅದೆಂತಹದ್ದೋ ಉತ್ಸಾಹ ಮೈಯೊಳಗೆ ಹೊಕ್ಕವರಂತೆ ಆಡುತ್ತಾರೆ. ಅದು ನಿನ್ನೆ ಮತ್ತೊಮ್ಮೆ ಸಾಬೀತಾಯಿತು.

 
ನಿನ್ನೆಯವರೆಗೂ ಕೊಹ್ಲಿ ಫಾರ್ಮ್ ಚಿಂತೆ ಅಭಿಮಾನಿಗಳಿಗೆ ಕಾಡುತ್ತಿತ್ತು. ಅವರ ಬ್ಯಾಟ್ ನಿಂದ ವಾವ್ ಎನಿಸುವಂತಹ ಎಂದಿನ ಹೊಡೆತಗಳು ಬರುತ್ತಿಲ್ಲವಲ್ಲಾ ಎಂದು ಅಭಿಮಾನಿಗಳು ನಿರಾಸೆಯಲ್ಲಿದ್ದರು. ಅದ್ಯಾಕೆ ಕೊಹ್ಲಿ ಪಾಕಿಸ್ತಾನದ ವಿರುದ್ಧ ಅಷ್ಟು ಪರದಾಡುತ್ತಾ ಅರ್ಧಶತಕ ಗಳಿಸಿದರು ಎಂದು ಪ್ರಶ್ನೆ ಮೂಡಿತ್ತು.

ಆದರೆ ನಿನ್ನೆ ಟೀಂ ಇಂಡಿಯಾಕ್ಕೆ ರನ್ ಚೇಸ್ ಮಾಡಲು ಅವಕಾಶ ಸಿಕ್ಕಿದ್ದೇ ತಡ ಕೊಹ್ಲಿ ಎಂದಿನ ಲಯಕ್ಕೆ ಮರಳಿದರು. ಅವರಷ್ಟು ಚೆನ್ನಾಗಿ ತಂಡದ ಅಗತ್ಯಕ್ಕೆ ತಕ್ಕಂತೆ ರನ್ ಗಳಿಸಿಕೊಂಡು ಗೆಲುವು ದಾಖಲಿಸುವ ಕಲೆ ಸದ್ಯಕ್ಕೆ ಬೇರೆ ಯಾವ ಬ್ಯಾಟ್ಸ್ ಮನ್ ಗೂ ಇಲ್ಲವೇನೋ. ಎಷ್ಟೇ ಮೊತ್ತವಾಗಿದ್ದರೂ, ಅಷ್ಟು ಸುಲಭ ಮಾಡಿಬಿಡುತ್ತಾರೆ.

ಹಿಂದೆ ಸಚಿನ್ ತೆಂಡುಲ್ಕರ್ ಒಬ್ಬರೇ ಎದುರಾಳಿಗಳ ಟಾರ್ಗೆಟ್ ಆಗಿರುತ್ತಿದ್ದರು. ಆದರೆ ಈಗ ಎದುರಾಳಿಗಳಿಗೆ ಬೌಲಿಂಗ್ ಮಾಡುವಾಗ ಕೊಹ್ಲಿ, ಬ್ಯಾಟಿಂಗ್ ಮಾಡುವಾಗ ವಿಕೆಟ್ ಹಿಂದುಗಡೆ ಮಿಂಚಿನಂತೆ ಕೆಲಸ ಮಾಡುವ ಧೋನಿಯಿಂದ ಪಾರಾಗುವುದೇ ಸವಾಲಾಗಿದೆ.

ಇದೇ ಕಾರಣಕ್ಕೆ ಇತ್ತೀಚೆಗೆ ಎದುರಾಳಿಗಳು ಟಾಸ್ ಗೆದ್ದರೆ, ಭಾರತಕ್ಕೆ ಯಾವುದೇ ಕಾರಣಕ್ಕೂ ಮೊದಲು ಫೀಲ್ಡಿಂಗ್ ಮಾಡಲು ಹೇಳುವುದೇ ಇಲ್ಲ. ಅವರ 27 ಏಕದಿನ ಶತಕಗಳ ಪೈಕಿ 14 ಶತಕಗಳು ಚೇಸ್ ಮಾಡುವಾಗಲೇ ಬಂದಿದೆ. ಚೇಸಿಂಗ್ ಮಾಡುವಾಗ ಅವರ ಬ್ಯಾಟಿಂಗ್ ಸರಾಸರಿ 90 ರ ಮೇಲಿದೆ.

ಟೀಂ  ಇಂಡಿಯಾ ಬಿಗ್ ರನ್ ಚೇಸಿಂಗ್ ಮಾಡುವಾಗಲೆಲ್ಲಾ ಕೊಹ್ಲಿ ಪಾತ್ರವೇ ಬಹುದೊಡ್ಡದಾಗಿದೆ. 2013 ರಲ್ಲಿ ಜೈಪುರದಲ್ಲಿ ನಡೆದ ಪಂದ್ಯದಲ್ಲಿ 52 ಬಾಲ್ ಗಳಲ್ಲಿ 100 ರನ್ ಹೊಡೆದು ಭಾರತ 360 ರನ್ ಗಳ ಅಸಾಧ್ಯ ಗುರಿ ಮುಟ್ಟಲು ಸಹಾಯ ಮಾಡಿದ್ದರು. ಅದೇ ಸರಣಿಯಲ್ಲಿ ಮತ್ತೊಮ್ಮೆ ಶತಕ ಗಳಿಸಿ 351 ರನ್ ಚೇಸ್ ಮಾಡಿದ್ದರು.

ಇದಕ್ಕಿಂತ ಮೊದಲು 2012 ರಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 40 ಓವರ್ ಗಳಲ್ಲಿ 321 ರನ್ ಗಳಿಸಬೇಕಾಗಿದ್ದಾಗ ಇದೇ ಕೊಹ್ಲಿ 86 ಬಾಲ್ ಗಳಲ್ಲಿ 133 ರನ್ ಹೊಡೆದು ಅಸಾಧ್ಯವೆನಿಸಿದ್ದನ್ನು ಸಾಧಿಸಿ ತೋರಿದ್ದರು. ಇದೇ ಕಾರಣಕ್ಕೆ ಕೊಹ್ಲಿ ನಮಗೆ ಸ್ಪೆಷಲ್ ಅನಿಸುತ್ತಾರೆ. ಎದುರಾಳಿಗಳಿಗೆ ಸಿಂಹ ಸ್ವಪ್ನರಾಗುತ್ತಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿನ್ನೆಯ ಟೀಂ ಇಂಡಿಯಾ-ದ.ಆಫ್ರಿಕಾ ಪಂದ್ಯದಲ್ಲಿ ಏನೇನು ದಾಖಲೆಗಳಾಯ್ತು?