Publish Date: Mon, 10 Aug 2020 (11:43 IST)
Updated Date: Mon, 10 Aug 2020 (11:44 IST)
ಚೆನ್ನೈ: ಐಪಿಎಲ್ 13 ನೇ ಆವೃತ್ತಿ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಇದೀಗ ಎಲ್ಲಾ ಫ್ರಾಂಚೈಸಿಗಳೂ ತಮ್ಮ ತೆರೆಮರೆಯ ತಯಾರಿ ಆರಂಭಿಸಿವೆ.
ಆಟಗಾರರಂತೂ ಮತ್ತೆ ಕಣಕ್ಕಿಳಿಯಲು ಕಾತುರರಾಗಿದ್ದಾರೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ಸುರೇಶ್ ರೈನಾ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದು, ತಾವು ಮತ್ತೆ ಚೆನ್ನೈ ಪಾಳಯ ಸೇರಲು ಕಾತುರರಾಗಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಧೋನಿ, ಮುರಳಿ ವಿಜಯ್ ಜತೆಗೆ ಡ್ರೆಸ್ಸಿಂಗ್ ರೂಂನಲ್ಲಿ ಸಂತೋಷದ ಕ್ಷಣದ ಫೋಟೋವನ್ನು ಪ್ರಕಟಿಸಿರುವ ರೈನಾ ‘ರೆಡಿ ಟು ಗೋ’ ಎಂದಿದ್ದಾರೆ.