ಮುಂಬೈ: ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ಕೇಳಿಬಂದಿರುವ ಸ್ಪಾಟ್ ಫಿಕ್ಸಿಂಗ್ ಆಪಾದನೆಗಳ ಬೆನ್ನಲ್ಲೇ ಈಗ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಪಡೆ ಈಗ ತನಿಖೆ ಕೆಲಸ ಶುರು ಮಾಡಿಕೊಂಡಿದೆ.
ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಭ್ರಷ್ಟಾಚಾರ ನಿಗ್ರಹ ಪಡೆ ಮುಖ್ಯಸ್ಥ ಅಜಿತ್ ಸಿಂಗ್ ‘ಧೋನಿ, ಕೊಹ್ಲಿಯಂತಹ ಸ್ಟಾರ್ ಆಟಗಾರರನ್ನು ಬುಕಿಗಳು ಯಾವತ್ತೂ ಸಂಪರ್ಕಿಸುವ ಸಾಹಸವನ್ನೂ ಮಾಡಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇವಲ ಯಶಸ್ಸು ಗಳಿಸಲು ಸಾಧ್ಯವಾಗದ ಯುವ ಆಟಗಾರರೇ ಇವರಿಗೆ ಟಾರ್ಗೆಟ್ ಆಗುತ್ತಿದ್ದಾರೆ. ಧೋನಿ, ಕೊಹ್ಲಿಯಂತಹ ಸ್ಟಾರ್ ಆಟಗಾರರನ್ನು ಬುಕ್ ಮಾಡಲು ಇವರಿಗೆ ಆಗಲ್ಲ. ಹೀಗಾಗಿ ಮ್ಯಾಚ್ ಫಿಕ್ಸಿಂಗ್ ಮಾಡುವುದಕ್ಕೆ ಕೇವಲ ಹಣವೊಂದೇ ಕಾರಣವಾಗುವುದಿಲ್ಲ. ಗೌರವ ಕೂಡಾ ಮುಖ್ಯವಾಗುತ್ತದೆ ಎಂದು ಅಜಿತ್ ಸಿಂಗ್ ಹೇಳಿಕೊಂಡಿದ್ದಾರೆ.