Webdunia - Bharat's app for daily news and videos

Install App

ದ್ರಾವಿಡ್ ಗೇ ನೋಟಿಸ್ ಕೊಡ್ತೀರಾ? ಭಾರತೀಯ ಕ್ರಿಕೆಟ್ ನ್ನು ದೇವರೇ ಕಾಪಾಡಬೇಕು! ಬಿಸಿಸಿಐಗೆ ಗಂಗೂಲಿ ಲೇವಡಿ

Webdunia
ಗುರುವಾರ, 8 ಆಗಸ್ಟ್ 2019 (08:54 IST)
ಮುಂಬೈ: ಇತ್ತೀಚೆಗಿನ ದಿನಗಳಲ್ಲಿ ಪ್ರಮುಖ ಕ್ರಿಕೆಟಿಗರು ಸ್ವ ಹಿತಾಸಕ್ತಿ ಸಂಘರ್ಷ ವಿವಾದಕ್ಕೆ ಗುರಿಯಾಗುತ್ತಿರುವುದು ಸಾಮಾನ್ಯವಾಗಿದೆ. ಇದೇ ಕಾರಣಕ್ಕೆ ಪ್ರಮುಖ ಕ್ರಿಕೆಟಿಗರಿಗೆ ಬಿಸಿಸಿಐ ನೋಟಿಸ್ ಜಾರಿ ಮಾಡುತ್ತಿರುವುದು ಮಾಮೂಲಿಯಾಗಿದೆ.


ಇದರ ವಿರುದ್ಧ ಈಗ ಮಾಜಿ ನಾಯಕ ಸೌರವ್ ಗಂಗೂಲಿ ಸಿಡಿದೆದ್ದಿದ್ದಾರೆ. ಅದೂ ಭಾರತೀಯ ಕ್ರಿಕೆಟ್ ನ ಮೋಸ್ಟ್ ಜಂಟಲ್ ಮ್ಯಾನ್ ಎಂದೇ ಖ್ಯಾತರಾಗಿರುವ ರಾಹುಲ್ ದ್ರಾವಿಡ್ ಗೆ ಬಿಸಿಸಿಐ ಈಗ ಸ್ವ ಹಿತಾಸಕ್ತಿ ಹುದ್ದೆ ಸಂಘರ್ಷದ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ನೀಡಿದೆ. ದ್ರಾವಿಡ್ ಗೂ ನೋಟಿಸ್ ನೀಡಿರುವುದಕ್ಕೆ ಗಂಗೂಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಭಾರತೀಯ ಕ್ರಿಕೆಟ್ ನ ಹೊಸ ಫ್ಯಾಶನ್. ಸ್ವ ಹಿತಾಸಕ್ತಿ ಸಂಘರ್ಷ ಎಂಬುದು ಇತ್ತೀಚೆಗೆ ಸುದ್ದಿಯಲ್ಲಿರುವುದಕ್ಕೆ ಭಾರತೀಯ ಕ್ರಿಕೆಟ್ ನ ಫ್ಯಾಶನ್ ಆಗುತ್ತಿದೆ. ಭಾರತೀಯ ಕ್ರಿಕೆಟ್ ನ್ನು ದೇವರೇ ಕಾಪಾಡಬೇಕು. ಬಿಸಿಸಿಐ ರಾಹುಲ್ ದ್ರಾವಿಡ್ ಗೆ ಈಗ ನೋಟಿಸ್ ನೀಡಿದೆ’ ಎಂದು ಗಂಗೂಲಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎನ್ ಸಿಎ ಅಧ್ಯಕ್ಷರಾಗಿರುವ ದ್ರಾವಿಡ್ ಐಪಿಎಲ್ ನ ಸಿಎಸ್ ಕೆ ತಂಡದ ಮಾಲಿಕ ಇಂಡಿಯಾ ಸಿಮೆಂಟ್ಸ್ ಸಂಸ್ಥೆಯಲ್ಲಿ ಉಪಾಧ್ಯಕ್ಷ ಹುದ್ದೆ ಹೊಂದಿದ್ದಾರೆ ಎಂಬುದು ಆರೋಪ. ಬಿಸಿಸಿಐ ಕೋಚ್ ಅಥವಾ ಇತರ ಸಮಿತಿಗಳಲ್ಲಿರುವವರು ಖಾಸಗಿ ಸಂಸ್ಥೆಗಳಲ್ಲಿ ಹುದ್ದೆ ಹೊಂದುವಂತಿಲ್ಲ ಎಂಬುದು ನಿಯಮ. ಈಗ ದ್ರಾವಿಡ್ ಇಂಡಿಯಾ ಸಂಸ್ಥೆ ಉಪಾಧ್ಯಕ್ಷ ಎನ್ನುವುದರಿಂದ ಸ್ವ ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿದ್ದಾರೆ. ಆಗಸ್ಟ್ 16 ರೊಳಗಾಗಿ ದ್ರಾವಿಡ್ ನೋಟಿಸ್ ಗೆ ಉತ್ತರಿಸಬೇಕಾಗಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments