ಮುಂಬೈ: ಟೀಂ ಇಂಡಿಯಾಗೆ ನೂತನ ಕೋಚ್ ಆಯ್ಕೆ ಮಾಡಲು ಹೊರಟಿರುವ ಕಪಿಲ್ ದೇವ್ ನೇತೃತ್ವದ ಬಿಸಿಸಿಐ ಸಲಹಾ ಸಮಿತಿ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯವನ್ನು ಗೌರವಿಸುವುದಾಗಿ ಹೇಳಿಕೊಂಡಿದೆ.
ಸಲಹಾ ಸಮಿತಿಯ ಮುಖ್ಯಸ್ಥರಾಗಿರುವ ಕಪಿಲ್ ದೇವ್ ನಾಯಕ ಕೊಹ್ಲಿ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ವಿಂಡೀಸ್ ಪ್ರವಾಸಕ್ಕೆ ತೆರಳುವ ಮುನ್ನ ವಿರಾಟ್ ಕೊಹ್ಲಿ ನಮಗೆ ರವಿಶಾಸ್ತ್ರಿಯೇ ಕೋಚ್ ಆಗಿ ಮುಂದುವರಿದರೆ ಸಂತೋಷವಾಗುತ್ತದೆ ಎಂದಿದ್ದರು. ಕೊಹ್ಲಿ ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡಿದ್ದಕ್ಕೆ ಕೆಲವರು ಟೀಕೆ ಮಾಡಿದ್ದರು. ಕೋಚ್ ಆಯ್ಕೆ ಸಮಿತಿಯ ಸದಸ್ಯರಾಗಿರುವ ಅಂಶುಮಾನ್ ಗಾಯಕ್ ವಾಡ್ ಕೊಹ್ಲಿ ಹೇಳಿದವರನ್ನೇ ಕೋಚ್ ಮಾಡಲ್ಲ ಎಂದಿದ್ದರು. ಆದರೆ ಇದೀಗ ಕಪಿಲ್ ದೇವ್ ನಾಯಕನ ಮಾತನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಆ ಮೂಲಕ ರವಿಶಾಸ್ತ್ರಿಯೇ ಕೋಚ್ ಆಗಿ ಮುಂದುವರಿದರೂ ಅಚ್ಚರಿಯಿಲ್ಲ ಎಂಬ ಸಂದೇಶ ನೀಡಿದ್ದಾರೆ.