ಮುಂಬೈ: ಸಚಿನ್ ತೆಂಡುಲ್ಕರ್ ಜತೆ ಸೌರವ್ ಗಂಗೂಲಿ ಅದೆಷ್ಟೋ ದಾಖಲೆಯ ಇನಿಂಗ್ಸ್ ಆಡಿರುವುದು ಕ್ರಿಕೆಟ್ ಪ್ರಿಯರ ಮನದಲ್ಲಿ ಸದಾ ಹಸಿರಾಗಿದೆ. ಆದರೆ ಈ ಬ್ಯಾಟಿಂಗ್ ದಿಗ್ಗಜನ ರಹಸ್ಯವೊಂದನ್ನು ಗಂಗೂಲಿ ಬಿಚ್ಚಿಟ್ಟಿದ್ದಾರೆ.
ಗಂಗೂಲಿ ಇತ್ತೀಚೆಗೆ ತಾವು ಬರೆದ ‘ಎ ಸೆಂಚುರಿ ನಾಟ್ ಎನಫ್’ ಎಂಬ ಆತ್ಮಕತೆಯಲ್ಲಿ ಕುತೂಹಲಕಾರಿ ವಿಷಯವನ್ನು ಹೊರ ಹಾಕಿದ್ದಾರೆ. ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ದಾಖಲಿಸಿದ್ದ ಗಂಗೂಲಿ ಆ ಪಂದ್ಯದ ನಡುವೆ ನಡೆದ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಅದು ನನ್ನ ಮೊದಲ ಟೆಸ್ಟ್ ಪಂದ್ಯವಾಗಿತ್ತು. ನಾನು 6 ಗಂಟೆಗಳ ಕಾಲ ನಿರಂತರ ಬ್ಯಾಟಿಂಗ್ ನಡೆಸಿ 100 ರನ್ ಗಳಿಸಿದ್ದೆ. ಆಗ ಚಹಾ ವಿರಾಮ ಘೋಷಿಸಲಾಗಿತ್ತು. ಚಹಾ ವಿರಾಮ ಕೇವಲ 15 ನಿಮಿಷಗಳದ್ದು. ನನ್ನ ಎದುರು ಬಿಸಿ ಬಿಸಿ ಚಹಾ ಇಡಲಾಗಿತ್ತು.
ಆದರೆ ನನ್ನ ಬ್ಯಾಟ್ ಹಿಡಿಕೆ ಬಿರುಕು ಬಿಟ್ಟಿತ್ತು. ಇದನ್ನು ರಿಪೇರಿ ಮಾಡಬೇಕಿತ್ತು. ನಾನು ಚಹಾ ಕುಡಿಯುವುದನ್ನು ಪಕ್ಕಕ್ಕಿಟ್ಟು ಹಿಡಿಕೆಗೆ ಟ್ಯಾಪ್ ಅಂಟಿಸುತ್ತಿದ್ದೆ. ಈ ವೇಳೆ ನನ್ನ ಬಳಿ ಬಂದ ತೆಂಡುಲ್ಕರ್ ನೀನು ತುಂಬಾ ಹೊತ್ತು ಬ್ಯಾಟ್ ಮಾಡಿದ್ದಿ ದಣಿದಿರುವೆ. ಈಗ ರೆಸ್ಟ್ ಮಾಡು. ಮತ್ತೆ ಬ್ಯಾಟಿಂಗ್ ಗೆ ಇಳಿಯಬೇಕು ನೀನು ಎಂದು ನಾನು ರಿಪೇರಿ ಮಾಡುತ್ತಿದ್ದ ಬ್ಯಾಟ್ ಪಡೆದು ತಾವೇ ಟ್ಯಾಪ್ ಅಳವಡಿಸಿ ರಿಪೇರಿ ಮಾಡಿಕೊಟ್ಟರು’ ಎಂದು ಗಂಗೂಲಿ ಸಚಿನ್ ರ ವಿನೀತ ಗುಣವನ್ನು ಸ್ಮರಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ