Publish Date: Fri, 27 Aug 2021 (09:05 IST)
Updated Date: Fri, 27 Aug 2021 (09:10 IST)
ಚೆನ್ನೈ: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ನಾಯಕರಾಗಲು ರವಿಚಂದ್ರನ್ ಅಶ್ವಿನ್ ಸೂಕ್ತ ಎನ್ನುವ ಮೂಲಕ ತಮಿಳು, ತೆಲುಗು ನಟ ಸಿದ್ಧಾರ್ಥ್ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.
ಅಶ್ವಿನ್ ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಬಳಗದಲ್ಲಿ ಅವಕಾಶ ಸಿಗದೇ ಬೆಂಚ್ ಕಾಯಿಸುತ್ತಿದ್ದಾರೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ನಾಯಕತ್ವದಲ್ಲಿ ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ತಂಡ ವಿಫಲವಾಗಿದೆ.
ಇದರ ಬೆನ್ನಲ್ಲೇ ಸಿದ್ಧಾರ್ಥ್ ರವಿಚಂದ್ರನ್ ಅಶ್ವಿನ್ ರನ್ನು ಟೀಂ ಇಂಡಿಯಾ ನಾಯಕರಾಗಿ ನಾವು ನೋಡಬಹುದೇ? ಕೊನೆ ಪಕ್ಷ ಹಾಗಾದರೂ ಅವರಿಗೆ ತಂಡದಲ್ಲಿ ಆಡುವ ಅವಕಾಶ ಸಿಗಬಹುದು ಎಂದು ಸಿದ್ಧಾರ್ಥ್ ಅಸಮಾಧಾನ ಹೊರಹಾಕಿದ್ದಾರೆ. ವಿಶೇಷವೆಂದರೆ ಅವರಿಗೆ ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ.