Publish Date: Fri, 14 May 2021 (09:40 IST)
Updated Date: Fri, 14 May 2021 (09:42 IST)
ಮುಂಬೈ: ಗಾಯಗೊಂಡು ಶಸ್ತ್ರಚಿಕಿತ್ಸೆಗೊಳಗಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಐಯರ್ ಸೆಪ್ಟೆಂಬರ್ ವೇಳೆಗೆ ಫಿಟ್ ಆಗುವ ಸಾಧ್ಯತೆಯಿದೆ.
ಶ್ರೇಯಸ್ ಐಯರ್ ಇಂಗ್ಲೆಂಡ್ ಸರಣಿ ವೇಳೆ ಗಾಯಗೊಂಡು ಅರ್ಧದಿಂದಲೇ ಟೂರ್ನಿಯಿಂದ ಹೊರನಡೆದಿದ್ದರು. ಅದಾದ ಬಳಿಕ ಐಪಿಎಲ್ 14 ರಲ್ಲೂ ಪಾಲ್ಗೊಂಡಿರಲಿಲ್ಲ.
ಇದರ ನಡುವೆ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಶ್ರೇಯಸ್ ಸೆಪ್ಟೆಂಬರ್ ವೇಳೆಗೆ ಫಿಟ್ ಆಗಿ ಅಕ್ಟೋಬರ್-ನವಂಬರ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ತಂಡಕ್ಕೆ ಲಭ್ಯರಾಗಲಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಅವರು ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.