ಇಸ್ಲಾಮಾಬಾದ್: ಕೊರೋನಾ ಲಾಕ್ ಡೌನ್ ನಿಂದಾಗಿ ಪಾಕಿಸ್ತಾನ ಮೂಲದ ಕ್ರಿಕೆಟಿಗ ಶೊಯೇಬ್ ಮಲಿಕ್ ಗೆ ತನ್ನ ಪತ್ನಿ, ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ಭೇಟಿಯಾಗಲು ಕಳೆದ ಐದು ತಿಂಗಳಿನಿಂದ ಅವಕಾಶ ಸಿಕ್ಕಿರಲಿಲ್ಲ.
ಇದೀಗ ಜೂನ್ 28 ರಂದು ಇಂಗ್ಲೆಂಡ್ ಪ್ರವಾಸಕ್ಕೆ ಪಾಕ್ ಕ್ರಿಕೆಟ್ ತಂಡ ತೆರಳಲಿದ್ದು, ಜುಲೈ ನಲ್ಲಿ ಇಂಗ್ಲೆಂಡ್ ನಲ್ಲಿ ಸಾನಿಯಾರನ್ನು ಭೇಟಿ ಮಾಡಲು ಪಾಕ್ ಕ್ರಿಕೆಟ್ ಮಂಡಳಿ ವಿಶೇಷ ಅವಕಾಶ ನೀಡಿದೆ.
ಇಂಗ್ಲೆಂಡ್ ಗೆ ತೆರಳಲಿರುವ ತನ್ನ ಕ್ರಿಕೆಟಿಗರಿಗೆ ಕುಟುಂಬದ ಜತೆಗಿರಲು ಪಿಸಿಬಿ ಅವಕಾಶ ನಿರಾಕರಿಸಿದೆ. ಆದರೆ ಮಲಿಕ್ ವಿಚಾರದಲ್ಲಿ ವಿಶೇಷ ಅವಕಾಶ ನೀಡಿದೆ. ಸಾನಿಯಾ ಸದ್ಯಕ್ಕೆ ಒಂದು ವರ್ಷದ ಪುತ್ರ ಇಝಾನ್ ಜತೆಗೆ ಭಾರತದಲ್ಲಿದ್ದರೆ, ಮಲಿಕ್ ಪಾಕಿಸ್ತಾನದಲ್ಲಿದ್ದಾರೆ.
ಜುಲೈ 24 ರಂದು ಈ ಇಬ್ಬರ ಭೇಟಿಗೆ ಪಾಕ್ ಕ್ರಿಕೆಟ್ ಮಂಡಳಿ ಅವಕಾಶ ಕಲ್ಪಿಸಿದ್ದು, ಇಂಗ್ಲೆಂಡ್ ಗೂ ಈ ಬಗ್ಗೆ ಮನವಿ ಮಾಡಿದೆ.