ಕೊಲೊಂಬೊ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗಾಗಿ ದ್ವೀಪ ರಾಷ್ಟ್ರಕ್ಕೆ ತೆರಳಿರುವ ಟೀಂ ಇಂಡಿಯಾದ ಕೆಲವು ಆಟಗಾರರು ಡಬ್ಲ್ಯುಡಬ್ಲ್ಯುಎಫ್ ಚಾಂಪಿಪಯನ್ ಖಲಿ ಜತೆ ಫೋಟೋ ತೆಗೆಸಿಕೊಂಡಿದ್ದಕ್ಕೆ ಸಹ ಆಟಗಾರ ರೋಹಿತ್ ಶರ್ಮಾ ತಮಾಷೆ ಮಾಡಿದ್ದಾರೆ.
ಸಹ ಆಟಗಾರರ ಕಾಲೆಳೆಯುವ ಸಲುವಾಗಿ ರೋಹಿತ್ ಮುಂಬೈ ಇಂಡಿಯನ್ಸ್ ಐಪಿಎಲ್ ತಂಡ ಚಾಂಪಿಯನ್ ಆದಾಗ ಡಬ್ಲ್ಯುಡಬ್ಲ್ಯುಎಫ್ ಉಡುಗೊರೆಯಾಗಿ ನೀಡಿದ್ದ ಬೆಲ್ಟ್ ನ್ನು ಫೋಟೋ ಸಮೇತ ಹಾಕಿ ‘ನೋಡಿ ಬ್ಲ್ಯಾಕ್ ಬೆಲ್ಟ್ ಇಲ್ಲಿಯೇ ಬಾಕಿಯಿದೆ’ ಎಂದು ತಮಾಷೆ ಮಾಡಿದ್ದಾರೆ,
ದ್ವಿತೀಯ ಟೆಸ್ಟ್ ಗೆದ್ದ ಮೇಲೆ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಶಿಖರ್ ಧವನ್ ಮುಂತಾದ ಆಟಗಾರರು ದೈತ್ಯ ದೇಹಿ ಖಲಿ ಜತೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಭಾರೀ ವೈರಲ್ ಆಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ