ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಕರ್ತವ್ಯ ನಿಭಾಯಿಸಿದ್ದ ಅನಿಲ್ ಕುಂಬ್ಳೆಯ ವೇತನ ಬಾಕಿ ಹಣವನ್ನು ಬಿಸಿಸಿಐ ಚುಕ್ತಾ ಮಾಡಿದೆ.
ನಾಯಕ ವಿರಾಟ್ ಕೊಹ್ಲಿಯೊಂದಿಗಿನ ವೈಮನಸ್ಯದಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅನಿಲ್ ಕುಂಬ್ಳೆಗೆ ಬಿಸಿಸಿಐ 1 ಕೋಟಿ ರೂ. ವೇತನ ಬಾಕಿ ಉಳಿಸಿಕೊಂಡಿತ್ತು. ಅದನ್ನೀಗ ಚುಕ್ತಾ ಮಾಡಲಾಗಿದೆ.
ಕುಂಬ್ಳೆಗೆ ವೇತನ ಬಾಕಿ ತೀರಿಸಿರುವ ವಿಚಾರವನ್ನು ಬಿಸಿಸಿಐ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಕುಂಬ್ಳೆ ಜತೆಗೆ ಕ್ರಿಕೆಟಿಗ ಇಶಾಂತ್ ಶರ್ಮಾಗೂ 1 ಕೋಟಿ ರೂ. ವೇತನ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ.