ಮುಂಬೈ: ಏಷ್ಯಾ ಕಪ್ ನಲ್ಲಿ ಶಾಂತ ಸ್ವಭಾವದ ನಾಯಕತ್ವದಿಂದ ಮಿಂಚಿದ ರೋಹಿತ್ ಶರ್ಮಾಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಆಡುವ ಅವಕಾಶ ಮತ್ತೆ ಸಿಗದೇ ಹೋಯಿತು.
ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾರನ್ನು ಆಯ್ಕೆ ಮಾಡದೇ ಇರುವುದು ಇದೀಗ ಮತ್ತೆ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಮಾಜಿ ನಾಯಕ ಸೌರವ್ ಗಂಗೂಲಿ ಅಂತೂ ರೋಹಿತ್ ರನ್ನು ಮತ್ತೆ ಕಡೆಗಣಿಸಿರುವುದು ನಿಜಕ್ಕೂ ಅಚ್ಚರಿ ಎಂದಿದ್ದಾರೆ. ಅಷ್ಟೇ ಅಲ್ಲದೆ, ಟ್ವಿಟರಿಗರೂ ರೋಹಿತ್ ರನ್ನು ಕಡೆಗಣಿಸುತ್ತಿರುವುದಕ್ಕೆ ಬಿಸಿಸಿಐ ಆಯ್ಕೆಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಷ್ಯಾ ಕಪ್ ನಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಷ್ಟೇ ಅಲ್ಲದೆ, ಅತ್ಯುತ್ತಮ ಫಾರ್ಮ್ ನಲ್ಲಿದ್ದ ರೋಹಿತ್ ರನ್ನು ಟೆಸ್ಟ್ ತಂಡಕ್ಕೆ ಯಾಕೆ ಆಯ್ಕೆ ಮಾಡುತ್ತಿಲ್ಲವೆಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ಸ್ವತಃ ರೋಹಿತ್ ಗೂ ಈ ಬಗ್ಗೆ ಅಸಮಾಧಾನವಿದೆ. ಆದರೆ ಎಲ್ಲಾ ಗೆದ್ದರೂ ಇದೊಂದು ಮಾತ್ರ ರೋಹಿತ್ ಗೆ ಮರೀಚಿಕೆಯಾಗುತ್ತಿರುವುದು ವಿಪರ್ಯಾಸವೇ ಸರಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.