Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಾನೂ ಧೋನಿಯಂತೆ ಎಂದು ಹೇಳಿದಂತೆ ಮಾಡಿ ತೋರಿಸಿದ ರೋಹಿತ್ ಶರ್ಮಾ

ನಾನೂ ಧೋನಿಯಂತೆ ಎಂದು ಹೇಳಿದಂತೆ ಮಾಡಿ ತೋರಿಸಿದ ರೋಹಿತ್ ಶರ್ಮಾ
ದುಬೈ , ಭಾನುವಾರ, 30 ಸೆಪ್ಟಂಬರ್ 2018 (09:03 IST)
ದುಬೈ: ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ ರೋಹಿತ್ ಶರ್ಮಾ ನಾನೂ ಧೋನಿಯಂತೆ ಕೂಲ್ ಕ್ಯಾಪ್ಟನ್ ಎಂದು ಹೇಳಿಕೊಂಡಿದ್ದಾರೆ.

ಕೋಚ್ ರವಿಶಾಸ್ತ್ರಿ ಕೂಡಾ ರೋಹಿತ್ ಶರ್ಮಾ ಕೂಲ್ ಆಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೊಗಳಿದ್ದರು. ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ರೋಹಿತ್ ಶರ್ಮಾ ಕೂಡಾ ನಾನೂ ಧೋನಿಯಂತೆ ಎಂದಿದ್ದಾರೆ. ಹಿಂದೆ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲಿಸಿದಾಗ ರೋಹಿತ್ ಶರ್ಮಾ ಪತ್ನಿ ರಿತಿಕಾ ಕೂಡಾ ಪತಿಯನ್ನು ಧೋನಿಗೆ ಹೋಲಿಸಿ ಟ್ರೋಲ್ ಗೊಳಗಾಗಿದ್ದರು.

ಆದರೆ ಏಷ್ಯಾ ಕಪ್ ಫೈನಲ್ ನಂತರ ರೋಹಿತ್ ನಾನು ಧೋನಿಯಂತೆ ಎಂದು ಹೇಳಿಕೊಂಡಿದ್ದು ಮಾತ್ರವಲ್ಲ, ಅವರಂತೇ ವರ್ತಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಏಷ್ಯಾ ಕಪ್ ಟ್ರೋಫಿಯನ್ನು ತಂಡದ ಅತ್ಯಂತ ಕಿರಿಯ ಆಟಗಾರರ ಖಲೀಲ್ ಮೊಹಮ್ಮದ್ ಕೈಗೆ ಹಸ್ತಾಂತರಿಸಿದರು. ಸಾಮಾನ್ಯವಾಗಿ ಧೋನಿ ಇದೇ ರೀತಿ ಮಾಡುತ್ತಿದ್ದರು. ಈಗ ರೋಹಿತ್ ಕೂಡಾ ಅದನ್ನೇ ಮಾಡಿದ್ದಾರೆ. ಅಷ್ಟೇ ಅಲ್ಲದೆ ಹೀಗೆ ಮಾಡುವುದರಿಂದ ಯುವ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಫೈನಲ್ ನಲ್ಲಿ ಧೋನಿ ಮಾಡಿದ ಸ್ಟಂಪ್ ಔಟ್ ವಿವಾದದಲ್ಲಿ