ಮುಂಬೈ: ರೋಹಿತ್ ಶರ್ಮಾ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಮಾತನಾಡುವಾಗ ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಅಭಿಮಾನಿಯೊಬ್ಬ ಇಂಗ್ಲಿಷ್ ನಲ್ಲಿ ಮಾತನಾಡಿ ಎಂದಿದ್ದು ಇದಕ್ಕೆ ರೋಹಿತ್ ತಿರುಗೇಟು ಕೊಟ್ಟಿದ್ದಾರೆ.
ಜಸ್ಪ್ರೀತ್ ಬುಮ್ರಾ ಜತೆಗೆ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಬಂದ ರೋಹಿತ್ ಹಿಂದಿಯಲ್ಲೇ ಮಾತನಾಡುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಪದೇ ಪದೇ ಇಂಗ್ಲಿಷ್ ನಲ್ಲಿ ಮಾತನಾಡಿ ಎಂದಿದ್ದು ರೋಹಿತ್ ಗೆ ಅಸಮಾಧಾನವುಂಟು ಮಾಡಿತ್ತು.
ಇದಕ್ಕೆ ಕೊಂಚ ಅಸಹನೆಯಿಂದಲೇ ತಿರುಗೇಟು ಕೊಟ್ಟ ರೋಹಿತ್, ‘ನಾವು ಭಾರತೀಯರು, ಟಿವಿ ಸಂದರ್ಶನದಲ್ಲೂ ಹಿಂದಿಯಲ್ಲೇ ಮಾತಾಡ್ತೀವಿ. ಹೀಗಿರುವಾಗ ಈಗ ಮನೆಯಲ್ಲಿರುವಾಗ ಹಿಂದಿಯನ್ನೇ ಮಾತನಾಡೋದು’ ಎಂದಿದ್ದಾರೆ.