ನವದೆಹಲಿ: ಶ್ರೇಯಸ್ ಐಯರ್ ಅನುಪಸ್ಥಿತಿಯಲ್ಲಿ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಗೆ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ತಂಡ ನಾಯಕತ್ವದ ಹೊಣೆಗಾರಿಕೆ ನೀಡಿದೆ.
ಇದು ಭವಿಷ್ಯದ ದೃಷ್ಟಿಯಿಂದ ರಿಷಬ್ ಗೆ ಲಾಭವಾಗುವ ಸಾಧ‍್ಯತೆಯಿದೆ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ರಿಷಬ್ ಈಗ ಟೀಂ ಇಂಡಿಯಾದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆಟಗಾರನಾಗಿ ಅವರ ಸ್ಥಾನ ತಂಡದಲ್ಲಿ ಪಕ್ಕಾ ಆಗಿದೆ.
ಇನ್ನು, ವಿರಾಟ್ ಕೊಹ್ಲಿ ನಂತರ ಟೀಂ ಇಂಡಿಯಾಗೆ ನಾಯಕ ಯಾರು ಎಂಬ ಪ್ರಶ್ನೆಗೆ ಈ ಐಪಿಎಲ್ ಉತ್ತರ ನೀಡುತ್ತಲೇ ಬಂದಿದೆ. ಕಳೆದ ಆವೃತ್ತಿಯಲ್ಲಿ ಶ್ರೇಯಸ್ ಐಯರ್ ನಾಯಕರಾಗಿ ಭರವಸೆ ಮೂಡಿಸಿದ್ದರು. ಇದೀಗ ರಿಷಬ್ ಪಂತ್ ನಾಯಕತ್ವದಲ್ಲಿ ಕ್ಲಿಕ್ ಆದರೆ ಭವಿಷ್ಯದಲ್ಲಿ ಟೀಂ ಇಂಡಿಯಾ ನಾಯಕತ್ವಕ್ಕೆ ಅವರೂ ಪ್ರಬಲ ಸ್ಪರ್ಧಿಯಾಗಬಹುದು. ಹೀಗಾಗಿ ರಿಷಬ್ ಪಾಲಿಗೆ ಇದು ಮಹತ್ವದ ಜವಾಬ್ಧಾರಿಯಾಗಲಿದೆ.