ಮುಂಬೈ: ಮುಂಬರುವ ವಿಶ್ವಕಪ್ ಬಳಿಕ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ತಮ್ಮ ಹುದ್ದೆಯಿಂದ ನಿರ್ಗಮಿಸಲಿದ್ದಾರಾ? ಅವರ ಗುತ್ತಿಗೆ ಅವಧಿ ಮುಂದುವರಿಯುತ್ತಾ? ಹೀಗೊಂದು ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.
ಜುಲೈ 2019 ಕ್ಕೆ ಕೋಚ್ ರವಿಶಾಸ್ತ್ರಿ, ಭರತ್ ಅರುಣ್ ಗುತ್ತಿಗೆ ಅವಧಿ ಕೊನೆಗೊಳ್ಳಲಿದೆ. ಇದಾದ ಬಳಿಕ ರವಿಶಾಸ್ತ್ರಿ ಅವಧಿ ಮುಂದುವರಿಯುತ್ತಾ ಅಥವಾ ಬಿಸಿಸಿಐ ಹೊಸ ಕೋಚ್ ನೇಮಕಕ್ಕೆ ಮುಂದಾಗುತ್ತಾ ಎಂಬ ಪ್ರಶ್ನೆ ಮೂಡಿದೆ.
ಆದರೆ ಈ ಬಗ್ಗೆ ಇದುವರೆಗೆ ನಡೆದ ಬಿಸಿಸಿಐ ಸಭೆಯಲ್ಲಿ ತೀರ್ಮಾನವಾಗಿಲ್ಲ ಎನ್ನಲಾಗಿದೆ. ಒಂದು ವೇಳೆ ಭಾರತ ವಿಶ್ವಕಪ್ ನಲ್ಲಿ ಗೆದ್ದರೆ ರವಿಶಾಸ್ತ್ರಿ ಅವಧಿ ಖಂಡಿತವಾಗಿಯೂ ಮುಂದುವರಿಯಬಹುದು. ಯಾಕೆಂದರೆ ನಾಯಕ ವಿರಾಟ್ ಕೊಹ್ಲಿ ಜತೆಗೆ ಅವರ ಹೊಂದಾಣಿಕೆ ಚೆನ್ನಾಗಿದೆ. ಹೀಗಾಗಿ ಬಿಸಿಸಿಐ ರಿಸ್ಕ್ ತೆಗೆದುಕೊಳ್ಳದು. ಆದರೆ ಭಾರತ ವಿಶ್ವಕಪ್ ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದರೆ ರವಿಶಾಸ್ತ್ರಿ ಹುದ್ದೆಗೆ ಕತ್ತರಿ ಗ್ಯಾರಂಟಿ. ಹೀಗಾಗಿ ರವಿಶಾಸ್ತ್ರಿ ಕತೆ ಮುಂದೇನು ಎಂಬ ಪ್ರಶ್ನೆ ಮೂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ