Publish Date: Sun, 14 Jun 2020 (09:14 IST)
Updated Date: Sun, 14 Jun 2020 (09:16 IST)
ಮುಂಬೈ: ಧೋನಿ ಎಂದರೆ ತಮ್ಮ ಗಾಡ್ ಫಾದರ್ ಎನ್ನುವ ಅನೇಕ ಕ್ರಿಕೆಟಿಗರು ಟೀಂ ಇಂಡಿಯಾದಲ್ಲಿದ್ದಾರೆ. ಅವರಲ್ಲಿ ರವೀಂದ್ರ ಜಡೇಜಾ ಕೂಡಾ ಒಬ್ಬರು.
ಐಪಿಎಲ್ ಸೇರಿದಂತೆ ಟೀಂ ಇಂಡಿಯಾದಲ್ಲೂ ಧೋನಿ ನಾಯಕತ್ವದಲ್ಲಿ ಆಡಿದ ಅನುಭವವಿರುವ ರವೀಂದ್ರ ಜಡೇಜಾ ಅವರನ್ನು ದೊಡ್ಡಣ್ಣ ಎಂದೇ ಪರಿಗಣಿಸುತ್ತಾರೆ. ಅಂಥಾ ದೊಡ್ಡಣ್ಣನಿಗಾಗಿ ಜಡೇಜಾ ಈಗ ಕವಿತೆಯನ್ನೇ ಬರೆದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ‘ತುಮ್ಹಾರಿ ನಝರೋಂ ಮೇ ಹಮ್ನೇ ದೇಖಾ..’ ಎಂಬ ಕವಿತೆ ಸಾಲುಗಳನ್ನು ಧೋನಿಗಾಗಿ ಹೇಳಿದ್ದಾರೆ ಜಡೇಜಾ.