ಮುಂಬೈ: ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗದ 250 ವಿಕೆಟ್ ಪಡೆದ ಸಾಧನೆ ಮಾಡಿರಬಹುದು. ಆದರೆ ಕೋಚ್ ಅನಿಲ್ ಕುಂಬ್ಳೆ ಮಾಡಿರುವ ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಮುರಿಯುವುದು ಸುಲಭವಲ್ಲ ಎಂದಿದ್ದಾರೆ.
ಅನಿಲ್ ಕುಂಬ್ಳೆ 619 ವಿಕೆಟ್ ಪಡೆದು ಭಾರತದ ಪರ ಮುಂಚೂಣಿ ವಿಕೆಟ್ ಟೇಕರ್ ಆಗಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 800 ವಿಕೆಟ್ ಪಡೆದು ಜಾಗತಿಕ ದಾಖಲೆ ಮಾಡಿದ್ದಾರೆ. ಮುರಳಿ ದಾಖಲೆ ಮರಿಯುತ್ತೀರಾ ಎಂದು ಅಶ್ವಿನ್ ರನ್ನು ಕೇಳಿದ್ದಕ್ಕೆ “ಮುರಳಿ ದಾಖಲೆ ಮುರಿಯುವುದ ಕನಸೇ ಸರಿ. ಅದೊಂದು ಅಸಾಮಾನ್ಯ ಸಾಧನೆ.
ಹೆಚ್ಚೇಕೆ? ಅನಿಲ್ ಕುಂಬ್ಳೆ ಪಡೆದ 619 ವಿಕೆಟ್ ಗಿಂತ ಒಂದೇ ಒಂದು ವಿಕೆಟ್ ಹೆಚ್ಚಿಗೆ ನಾನು ಪಡೆಯುವುದೂ ಕಷ್ಟವೇ. ಒಂದು ವೇಳೆ ಸಾಧಿಸಿದರೆ ಅದು ಗೌರವದ ವಿಷಯ. ನಾನು ಟೆಸ್ಟ್ ಕ್ರಿಕೆಟ್ ಗೆ ಬಂದಿದ್ದೇ ತಡವಾಗಿ. ಕುಂಬ್ಳೆ ಸಾಧಿಸಿದಷ್ಟೆಲ್ಲಾ ನನ್ನಿಂದಾಗದು” ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ