ಮುಂಬೈ: ಯುವರಾಜ್ ಸಿಂಗ್ ಎಂದರೆ ಹಾಗೆ. ತಮಾಷೆ, ತರ್ಲೆ ಮಾಡುವುದು ಅವರ ಇಷ್ಟದ ಕೆಲಸ. ಇಂತಿಪ್ಪ ಯುವಿ ತಮ್ಮ ಹಳೆಯ ಸಹ ಆಟಗಾರ ಜಹೀರ್ ಖಾನ್ ಗೆಳತಿ ಸಾಗರಿಕಾ ಘಾಟೆ ಅವರನ್ನು ಟ್ವಿಟರ್ ನಲ್ಲಿ ತಮಾಷೆ ಮಾಡಿದ್ದಾರೆ.
ಸಾಗರಿಕಾ ಅಭಿನಯದ ಇರಾದೆ ಸಿನಿಮಾ ಸದ್ಯದಲ್ಲೇ ತೆರೆ ಕಾಣಲಿದೆ. ಹೀಗಾಗಿ ಯುವಿ ತಮ್ಮ ಗೆಳೆಯನ ಗೆಳತಿಗೆ ವಿಶ್ ಮಾಡುವ ನೆಪದಲ್ಲಿ ಕಾಲೆಳೆದಿದ್ದಾರೆ. ಅದೂ ಟ್ವಿಟರ್ ನಲ್ಲಿ. ಅವರು ಏನೆಂದು ತಮಾಷೆ ಮಾಡಿದರು? ನೋಡೋಣ ಬನ್ನಿ.
“ಗುಡ್ ಲಕ್ ಸಾಗರಿಕಾ. ಒಂದು ಕಾಲದಲ್ಲಿ ನೀವು ಭಾರತ ತಂಡದ ಉಪ ನಾಯಕನನ್ನು ಪ್ರೀತಿಸುವ ಕಾಲದಿಂದ ನನಗೆ ನಿಮ್ಮನ್ನು ಚೆನ್ನಾಗಿ ಗೊತ್ತು. ಆದರೆ ನಿಜ ಜೀವನದಲ್ಲಿ ಹಾಗೆ ಮಾಡಬೇಡಿ” ಎಂದು ಕಾಲೆಳೆದಿದ್ದಾರೆ. ಒಂದು ಕಾಲದಲ್ಲಿ ಯುವಿ ಭಾರತ ತಂಡದ ಉಪ ನಾಯಕನಾಗಿದ್ದರು.
ಸಾಗರಿಕಾ ಚಕ್ ದೇ ಇಂಡಿಯಾ ಸಿನಿಮಾದಲ್ಲಿ ಭಾರತ ಕ್ರಿಕೆಟ್ ತಂಡದ ಉಪ ನಾಯಕನ ಪ್ರೇಮಿಯಾಗಿ ಅಭಿನಯಿಸಿದ್ದರು. ಅದಕ್ಕೇ ಯುವಿ ಹೀಗೆ ತಮಾಷೆ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ