ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಬೇಕೆಂದರೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ಇಶಾಂತ್ ಶರ್ಮಾ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಫಿಟ್ ಆಗಬೇಕು ಎಂದು ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಗಾಯಾಳುಗಳಾಗಿರುವ ಇಬ್ಬರೂ ಆಟಗಾರರು ಸದ್ಯಕ್ಕೆ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರೂ ಸಾಕಷ್ಟು ಸುಧಾರಿಸಿಕೊಂಡಿದ್ದು, ಆಡಲು ರೆಡಿಯಾಗಿದ್ದಾರೆ. ಇವರ ಬಗ್ಗೆ ಹೇಳಿಕೆ ನೀಡಿರುವ ಕೋಚ್ ರವಿಶಾಸ್ತ್ರಿ ಕೆಂಪು ಚೆಂಡಿನಲ್ಲಿ ಆಡುವುದು ಕಠಿಣ. ಹೀಗಾಗಿ ಇಬ್ಬರೂ ಫಿಟ್ ಆಗುವುದು ಮುಖ್ಯ. ಇಬ್ಬರೂ ಆಟಗಾರರು ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಬೇಕಾದರೆ ಮೂರ್ನಾಲ್ಕು ದಿನಗಳಲ್ಲಿ ಫಿಟ್ ಆಗುವುದು ಮುಖ್ಯ ಎಂದಿದ್ದಾರೆ.