ಸಿಡ್ನಿ: ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯಗಳಿಗೆ ಗೈರು ಹಾಜರಾಗುವುದು ಟೀಂ ಇಂಡಿಯಾದ ಇತರ ಕ್ರಿಕೆಟಿಗರಿಗೆ ಲಾಭವಾಗಲಿದೆ ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಕೊಹ್ಲಿ ಅನುಪಸ್ಥಿತಿ ಟೀಂ ಇಂಡಿಯಾಗೆ ಹೇಗೆ ಲಾಭವಾಗುತ್ತೆ?
ಟೀಂ ಇಂಡಿಯಾದಲ್ಲಿ ಒಂದೇ ಒಂದು ಅವಕಾಶಕ್ಕಾಗಿ ಕಾಯುತ್ತಿರುವ ಎಷ್ಟೋ ಪ್ರತಿಭಾವಂತ ಕ್ರಿಕೆಟಿಗರಿದ್ದಾರೆ. ಅದೂ ಕೆಎಲ್ ರಾಹುಲ್ ರಂತಹ ಪ್ರತಿಭಾವಂತರೇ ಆಡುವ ಬಳಗದಲ್ಲಿ ಸ್ಥಾನ ಸಿಗಲು ಕಾಯುತ್ತಿದ್ದಾರೆ. ಅಂತಹ ಆಟಗಾರರಿಗೆ ಅವಕಾಶ ಸಿಗಲಿದೆ. ಇನ್ನು, ವಿದೇಶಕ್ಕೆ ಹೋದರೆ ಎಲ್ಲಾ ತಂಡಗಳೂ ಕೊಹ್ಲಿಯನ್ನೇ ಟಾರ್ಗೆಟ್ ಮಾಡುತ್ತವೆ. ಇದರಿಂದಾಗಿ ಕೊಹ್ಲಿ ಮೇಲೆ ತಂಡದ ಭಾರ ಹೆಚ್ಚುತ್ತದೆ. ಬೇರೆ ಕ್ರಿಕೆಟಿಗರು ಕೆಲವೊಮ್ಮೆ ಜವಾಬ್ಧಾರಿಯುತವಾಗಿ ಆಡುವುದನ್ನೇ ಮರೆಯುತ್ತಾರೆ. ಆದರೆ ಈಗ ಕೊಹ್ಲಿ ಇಲ್ಲ ಎನ್ನುವ ಅರಿವಿನಿಂದ ಒಳ್ಳೆಯ ಪ್ರದರ್ಶನ ನೀಡಬೇಕೆಂಬ ಜವಾಬ್ಧಾರಿ ಮತ್ತು ಹಠ ಹೆಚ್ಚಾಗಲಿದೆ. ಇದೆಲ್ಲವೂ ತಂಡದ ಮೇಲೆ ಪರಿಣಾಮ ಬೀರಲಿದೆ.