ನವದೆಹಲಿ: ಭಾರತ ತಂಡದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮುಂದಿನ ಎರಡು ವರ್ಷಗಳಿಗೆ ಎ ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ. ಅದರೊಂದಿಗೆ ದ್ರಾವಿಡ್ ಐಪಿಎಲ್ ಆದಾಯಕ್ಕೆ ಗುಡ್ ಬೈ ಹೇಳಿದ್ದಾರೆ.
ದ್ರಾವಿಡ್ ಗುತ್ತಿಗೆ ನವೀಕರಿಸಿರುವ ಬಿಸಿಸಿಐ ಮುಂದಿನ ಎರಡು ವರ್ಷಗಳಿಗೆ ಹೊಸದಾಗಿ ಒಪ್ಪಂದ ಮಾಡಿಕೊಂಡಿದೆ. ಇದರೊಂದಿಗೆ ಲಾಭದಾಯಕ ಹುದ್ದೆಯಲ್ಲಿದ್ದಾರೆಂಬ ಆರೋಪಗಳಿಂದ ಮುಕ್ತರಾಗಲು ಐಪಿಎಲ್ ನ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮೆಂಟರ್ ಹುದ್ದೆಯನ್ನು ತ್ಯಜಿಸಿದ್ದಾರೆ.
ಕಿರಿಯರ ತಂಡದ ಕೋಚ್ ಆಗಿ ದ್ರಾವಿಡ್ ಸಾಕಷ್ಟು ಯಶಸ್ಸು ಕಂಡಿದ್ದರು. ಇದೀಗ ಮತ್ತೆ ಅವರೇ ಆ ಹುದ್ದೆಯಲ್ಲಿ ಮುಂದುವರಿದಿರುವುದರಿಂದ ಹಿರಿಯರ ತಂಡದ ಕೋಚ್ ಆಗಬಹುದೆಂಬ ಸದ್ಯದ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ