ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದಾಗ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ನಡುವೆ ಸಾಮರಸ್ಯವಿರಲಿಲ್ಲ ಎಂದೆಲ್ಲಾ ಸುದ್ದಿಯಾಗಿತ್ತು. ಇದನ್ನು ಪುಷ್ಟೀಕರಿಸುವಂತಹ ಹೇಳಿಕೆಯನ್ನು ಸ್ವತಃ ಕುಂಬ್ಳೆ ನೀಡಿದ್ದರು.
ಹಾಗಿದ್ದರೂ ಅಲ್ಲಿ ನಿಜವಾಗಿ ಏನು ನಡೆದಿತ್ತು ಎನ್ನುವುದನ್ನು ಇಬ್ಬರೂ ಕ್ರಿಕೆಟಿಗರು ಬಾಯ್ಬಿಟ್ಟರಲಿಲ್ಲ. ಇದೀಗ ಟೀಂ ಇಂಡಿಯಾದ ಇನ್ನೊಬ್ಬ ಬ್ಯಾಟ್ಸ್ ಮನ್ ಶಿಖರ್ ಧವನ್ ಕುಂಬ್ಳೆ ಬಗ್ಗೆ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ.
‘ನಾನು ಕುಂಬ್ಳೆ ಕೋಚ್ ಆಗಿದ್ದಾಗ ತಂಡದಲ್ಲಿದ್ದದ್ದು ಕಡಿಮೆ. ಹಾಗಾಗಿ ನನಗೆ ಅವರ ಕೋಚಿಂಗ್ ಶೈಲಿಯ ಬಗ್ಗೆ ಹೆಚ್ಚು ಗೊತ್ತಿಲ್ಲ. ಹಾಗಿದ್ದರೂ ಎಲ್ಲರಿಗೂ ಅವರದ್ದೇ ಆದ ವೈವಿದ್ಯಮಯ ಸ್ವಭಾವವಿದೆ. ಧೋನಿ ಮತ್ತು ವಿರಾಟ್ ರನ್ನು ನೋಡುವುದಾದರೆ, ಇಬ್ಬರದ್ದೂ ವೈರುಧ್ಯ ಗುಣ. ಆದರೂ ಇಬ್ಬರೂ ತಮ್ಮ ತಂಡಕ್ಕೆ ಬೇಕಾಗಿ ಗೆಲುವು ತಂದುಕೊಡಲಿಲ್ಲವೇ?
ಇದೆಲ್ಲಾ ಸ್ವಾಭಾವಿಕ. ಆದರೆ ಅನಿಲ್ ಬಾಯ್ ಬಗ್ಗೆ ನನಗೆ ಗೌರವವಿದೆ. ರವಿ ಶಾಸ್ತ್ರಿಯಾಗಲಿ, ಅನಿಲ್ ಬಾಯ್ ಆಗಲಿ ತಂಡಕ್ಕೆ ಹಲವು ಗೆಲುವು ಕೊಡಿಸಿದ್ದಾರೆ. ಅವರ ಕೊಡುಗೆ ಅಪಾರ. ಅವರ ಬಗ್ಗೆ ನನಗೆ ಗೌರವವಿದೆ’ ಎಂದು ಡಿಫೆನ್ಸಿವ್ ಆಗಿ ಉತ್ತರಿಸಿ ಜಾರಿಕೊಂಡಿದ್ದಾರೆ ಧವನ್.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ