Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಶ್ವಕಪ್ ನಲ್ಲಿ ಭಾರತ ತಂಡಕ್ಕಿರುವ ದೊಡ್ಡ ಪ್ಲಸ್ ಪಾಯಿಂಟ್ ಬಿಚ್ಚಿಟ್ಟ ರಾಹುಲ್ ದ್ರಾವಿಡ್

ವಿಶ್ವಕಪ್ ನಲ್ಲಿ ಭಾರತ ತಂಡಕ್ಕಿರುವ ದೊಡ್ಡ ಪ್ಲಸ್ ಪಾಯಿಂಟ್ ಬಿಚ್ಚಿಟ್ಟ ರಾಹುಲ್ ದ್ರಾವಿಡ್
ನವದೆಹಲಿ , ಭಾನುವಾರ, 19 ಮೇ 2019 (07:28 IST)
ನವದೆಹಲಿ: ಈ ಬಾರಿ ವಿಶ್ವಕಪ್ ಗೆಲ್ಲಬಹುದಾದ ಪ್ರಬಲ ತಂಡಗಳಲ್ಲಿ ಟೀಂ ಇಂಡಿಯಾವೂ ಒಂದು. ಟೀಂ ಇಂಡಿಯಾಕ್ಕೆ ಇರುವ ದೊಡ್ಡ ಪ್ಲಸ್ ಪಾಯಿಂಟ್ ಏನೆಂದು ವಾಲ್ ರಾಹುಲ್ ದ್ರಾವಿಡ್ ಬಿಚ್ಚಿಟ್ಟಿದ್ದಾರೆ.


‘ಇಂಗ್ಲೆಂಡ್ ನಲ್ಲಿ ಆಡಿದ, ಕೋಚ್ ಆಗಿ ಕೆಲಸ ಮಾಡಿದ ಅನುಭವದ ಮೇಲೆ ಹೇಳುತ್ತಿದ್ದೇನೆ. ಈ ವಿ‍ಶ್ವಕಪ್ ನಲ್ಲಿ ಹೈ ಸ್ಕೋರಿಂಗ್ ಪಂದ್ಯಗಳಿರಬಹುದು. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಬೌಲರ್ ಗಳು ವಿಕೆಟ್ ಕೀಳುವುದು ಮುಖ್ಯವಾಗುತ್ತದೆ. ಭಾರತ ತಂಡಕ್ಕೆ ಆ ಸಾಮರ್ಥ್ಯವಿದೆ. ಹೀಗಾಗಿ ಟೀಂ ಇಂಡಿಯಾಕ್ಕೆ ವಿಶ್ವಕಪ್ ಗೆಲ್ಲುವ ಅವಕಾಶ ಹೆಚ್ಚಿದೆ’ ಎಂದು ದ್ರಾವಿಡ್ ವಿವರಿಸಿದ್ದಾರೆ.

‘ಭಾರತ ತಂಡದಲ್ಲಿ ಬುಮ್ರಾ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಳಬಲ್ಲರು. ಯಾವ ತಂಡದಲ್ಲಿ ಮಧ್ಯಮ ಓವರ್ ಗಳಲ್ಲಿ ವಿಕೆಟ್ ಕೀಳಬಲ್ಲ ಬೌಲರ್ ಗಳಿರುತ್ತಾರೋ ಆ ತಂಡ ಈ ಬಾರಿ ಪ್ರಾಬಲ್ಯ ಮೆರೆಯಲಿದೆ’ ಎಂದು ದ್ರಾವಿಡ್‍ ಭವಿಷ್ಯ ನುಡಿದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಹಳೆಯ ಫೋಟೋ ಪ್ರಕಟಿಸಿದ ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಿದ ಯುವರಾಜ್ ಸಿಂಗ್